ಜಿಲ್ಲೆ

ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಸವದತ್ತಿ: ಪ್ರಸಕ್ತ ಸಾಲಿನ ಕಷಿ ಸಂಸ್ಕರಣೆ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಕೃಷಿ ಸಂಸ್ಕರಣೆ ಟಕಗಳಾದ ಹಿಟ್ಟಿನ ಗಿರಣಿ, ಖಾರ ಕುಟ್ಟುವ ಮಷಿನ್​, ಶಾವಿಗೆ ಮಷಿನ್​, ಕಬ್ಬಿನ ರಸ ತೆಗೆಯುವ ಯಂತ್ರ ಶೇ.50 ಸಬ್ಸಿಡಿ ದರದಲ್ಲಿ ಹಾಗೂ ಎಣ್ಣೆ ಗಾಣ ಯಂತ್ರವು ಶೇ. 75 ಸಬ್ಸಿಡಿ ದರದಲ್ಲಿ ಲಭ್ಯವಿರುತ್ತವೆ. ಶೇ.90 ರಿಯಾಯಿತಿ ದರದಲ್ಲಿ ಈ ಹಿಂದಿನ 7 ವರ್ಷದಲ್ಲಿ ಸವಲತ್ತು ಪಡೆದುಕೊಳ್ಳದ ಪರಿಶಿಷ್ಟ ಜಾತಿ ರೆತರಿಗೆ ಸೂಕ್ಷ$್ಮ ನೀರಾವರಿ ಯೋಜನೆಯಡಿ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಟಕ ಲಭ್ಯವಿರುತ್ತವೆ. ಪಿಎಂಕೆಎಸ್​ವೈ ಯೋಜನೆಯಡಿ ಶೇ. 50 ಸಬ್ಸಿಡಿ ದರದಲ್ಲಿ ಪ್ರತಿ ಪೈಪ್​ಗೆ 384 ರೂ. ಪಾವತಿಸಿ ಪಡೆದುಕೊಳ್ಳಬಹುದಾಗಿದೆ.

ಕಷಿ ಭಾಗ್ಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಕಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸವದತ್ತಿ ಹಾಗೂ ಯರಗಟ್ಟಿ ತಾಲೂಕಿನ ಎಲ್ಲ ರೆತರು ಸಂಬಂಧಪಟ್ಟ ರೆತ ಸಂಪರ್ಕ ಕೇಂದ್ರಗಳಾದ ಸವದತ್ತಿ, ಮುನವಳ್ಳಿ, ಮುರಗೋಡ ಹಾಗೂ ಯರಗಟ್ಟಿ ರೆತ ಸಂಪರ್ಕ ಕೇಂದ್ರ ಕಚೇರಿಗಳಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸವಲತ್ತು ಪಡೆಯಬೇಕು ಎಂದು ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.