ಜಿಲ್ಲೆ

ವಿವಿಧ ಸಹಕಾರ ಸಂಘಗಳ ನೊಂದಣಿ ರದ್ದಿಗೆ ಕ್ರಮ

ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯಲ್ಲಿ ನೊಂದಣಿಗೊಂಡು ಬೈಲಾ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಸದಸ್ಯರು ಹಾಗೂ ಸಾರ್ವಜನಿಕರಿಗೆ ಅನುಪಯುಕ್ತವಾಗಿರುವ ಸಮಾಪನೆಯಲ್ಲಿರುವ ಸಹಕಾರ ಸಂಘಗಳ ನೊಂದಣಿಯನ್ನು ರದ್ದುಪಡಿಸುವ ಸಲುವಾಗಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಅಥವಾ ಸಂಘವು ನೀಡಿರುವ ಅಧಿಕೃತ ರಶೀದಿಯನ್ನು ಹಾಜರುಪಡಿಸಿ ಷೇರುಹಣವನ್ನು ವಾಪಸ್ಸು ಪಡೆಯಲು ಅಥವಾ ಯಾವುದೇ ಕ್ಲೈಮುಗಳಿದ್ದಲ್ಲಿ ಸಮರ್ಥನೀಯ ದಾಖಲೆಯೊಂದಿಗೆ ಜ.28 ರೊಳಗೆ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಖುದ್ದು ಹಾಜರಾಗಿ ಸಲ್ಲಿಸಬೇಕು.

ನಿಗದಿತ ಅವಧಿಯೊಳಗೆ ಸಂಘದ ನೋದಣಿ ರದ್ದತಿ ಸಂಬಂಧ ಆಕ್ಷೇಪಣೆ ಅಥವಾ ಕ್ಲೈಮು ಸಲ್ಲಿಕೆಯಾಗದಿದ್ದಲ್ಲಿ ಅಥವಾ ಸಂಘದಲ್ಲಿ ತೊಡಗಿಸಿರುವ ಷೇರು ಹಣವನ್ನು ವಾಪಸ್ಸು ಪಡೆಯಲು ಯಾರೂ ಆಸಕ್ತಿ ವಹಿಸದಿದ್ದಲ್ಲಿ ಸಂಘದ ನೊಂದಣಿ ರದ್ದತಿಗೆ ಕ್ರಮವಿಡಲಾಗುವುದು ಎಂದು ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.