ಜಿಲ್ಲೆ

ವಿವಿಧ ಸಂಘ ಸಂಸ್ಥೆಗಳಿಂದ ಚಿಕ್ಕಹೊನ್ನೇನಹಳ್ಳಿ ಕೆರೆಯನ್ನು ಸ್ವಚ್ಛತಾ ಕಾರ್ಯ

ಹಾಸನ: ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಚಿಕ್ಕಹೊನ್ನೇನಹಳ್ಳಿ ಕೆರೆಯನ್ನು ಸ್ವಚ್ಛತಾ ಕಾರ್ಯ ಸ್ವಚ್ಛತೆ ಮಾಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಸ್ವಚ್ಛತಾ ಶ್ರಮಧಾನದಲ್ಲಿ ಚಿಕ್ಕಹೊನ್ನೇನಹಳ್ಳಿ ಗ್ರಾಮಸ್ವರಾಜ್ ಸಮಿತಿ, ಹಸಿರುಭೂಮಿ ಪ್ರತಿಷ್ಠಾನ, ನಗರಸಭೆ,ಭಾರತ ಜ್ಞಾನ ವಿಜ್ಞಾನ ಸಮಿತಿ, ಜಯನಗರ ಘಟಕ ಸ್ನೇಹಿತರು, ಮುಂಜಾನೆ ಮಿತ್ರರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ , ಶ್ರೀ ಮಾರುತಿ ಕ್ಷೇಮಾಭಿವೃದ್ಧಿ ಸಂಘ, ಚಿಕ್ಕಹೊನ್ನೇನಹಳ್ಳಿ ಜಯನಗರ - ರಾಜಾಜಿನಗರ ನಿವಾಸಿ ವೃಂದ,ಪತಂಜಲಿ ಯೋಗಪರಿವಾರ, ಲಯನ್ಸ ಕ್ಲಬ್ ಸೇರಿದಂತೆ ನಿವಾಸಿಗಳು ಸ್ವಚ್ಚತಾ ಅಭಿಯಾನದಲ್ಲೀ ಭಾಗವಹಿಸಿ ಕೆರೆ ಅಂಗಳವನ್ನು ಸ್ವಚ್ಚಗೊಳಿಸಿದರು

ಕೆರೆಯ ಬದಿಯಲ್ಲಿನ ಗಿಡ ಗಂಟೆಗಳನ್ನು ತೆರವು ಗೊಳಿಸುವ ಜೊತೆಗೆ ಅಲ್ಲಿನ ಪ್ಲಾಸ್ಟಿಕ್ ಹಾಗೂ ಗಾಜಿನ ಚೂರುಗಳು ಹೆಕ್ಕಿ ತೆಗೆದರು. ಈಗಾಗಲೇ ಈ ಕೆರೆಯ ಅಭಿವೃದ್ದಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಸಂಘ ಸಂಸ್ಥೆಗಳು ಕೂಡ ತಮ್ಮ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು

ಪ್ರತಿ ಭಾನುವಾರ ಎಲ್ಲಾ ಸಂಘಟನೆಗಳು ಕೂಡ ಈ ರೀತಿ ಕರೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಕರೆ ನೀಡಿದ್ದಾಗ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟನೆಗಳ ಮುಖಂಡರು ಮನವಿ ಮಾಡಿದರು.

ಹಸಿರು ಭೂಮಿ ಪ್ರತಿಷ್ಠಾನದ ಅಹಮ್ಮದ್ ಹಗರೆ ಮಾತನಾಡಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆ ಮೂಲಭೂತ ಸೌಕರ್ಯಗಳ ಬಗ್ಗೆಯೂ ತಿಳಿಸಿದೆ. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಕೆರೆ ಸ್ವಚ್ಚತೆಗೆ ಕೈ ಜೋಡಿಸಬೇಕೆಂದು ಹೇಳಿದರು.

ನಗರಸಭೆ ಇಂಜಿನಿಯರ್ ಕವಿತಾ ಮಾತನಾಡಿ, ಕೆರೆ ಅಭಿವೃದ್ದಿ ನಮ್ಮೆಲ್ಲರ ಹೊಣೆ, ಈ ನಿಟ್ಟಿನಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಮ್ಮ ಕೆರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾರ ಸಹಕಾರಬೇಕು ಎಂದರು.

ಹಸಿರು ಭೂಮಿ ಪ್ರತಿಷ್ಟಾನದ ಉಪಾಧ್ಯಕ್ಷ ರಾಜೀವ್ ಗೌಡ ಮಾತನಾಡಿ, ಕೆರೆ ಸ್ವಚ್ಛತೆ ಅನೇಕ ಸಂಘಟನೆಗಳು ಒಂದಾಗಿ ಬಂದಿರುವುದು ತುಂಬಾ ಸಂತಸ ತಂದಿದೆ. ಪ್ರತಿ ಭಾನುವಾರ ಕೆರೆಯ ಸ್ವಚ್ಚತೆ ಮಾಡಿ ಸರ್ಕಾರದ ಸಹಯೋಗದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ನಾವು ಕೈ ಜೋಡಿಸೋಣ ಎಂದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಹತ್ತಾರು ಸಂಘಟನೆಗಳ ನೂರಾರು ಪದಾಧಿಕಾರಿಗಳು ಭಾಗವಹಿಸಿ ಗಮನ ಸೆಳೆದರು