ಕಕ್ಕೇರಿ: ಖಾನಾಪುರ ಹಾಗೂ ಬೆಳಗಾವಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು, ಬೆಳೆ ಸಾಲ ಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಕಕ್ಕೇರಿ ಗ್ರಾಮದಲ್ಲಿ ಶುಕ್ರವಾರ ತಾಳಗುಪ್ಪ-ಬೆಳಗಾವಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.
ರೈತ ಸಂಘಟನೆ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ರಾಜ್ಯ ಸರ್ಕಾರ ಖಾನಾಪುರ ಹಾಗೂ ಬೆಳಗಾವಿ ತಾಲೂಕು ಬರಪೀಡಿತ ಘೋಷಿಸಬೇಕು, ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಸೆ.30ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯ ಎದುರು ಪ್ರತಿಭಟಿಸಲಾಗುವುದು ಎಂದರು.
ರೈತ ಸಂಘಟನೆ ಬೆಳಗಾವಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ, ಜಿಲ್ಲಾ ರೈತ ಮುಖಂಡ ಪ್ರಕಾಶ ನಾಯಕ ಮಾತನಾಡಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ಪ್ರಕಾಶ ಗಾಯಕ್ವಾಡ ಮಾತನಾಡಿ, ಖಾನಾಪುರ ತಾಲೂಕು ಬರಪೀಡಿತ ಎಂದು ಘೋಷಣೆ ಆಗಲಿದೆ ಎಂದು ಭರವಸೆ ನೀಡಿದ ನಂತರ ರೈತರು ಧರಣಿ ಕೈಬಿಟ್ಟರು.
ನಂದಗಡ ಸಿಪಿಐ ಸಿ.ಎಸ್.ಪಾಟೀಲ, ರೈತ ಮುಖಂಡರಾದ ಯಲ್ಲಪ್ಪ ಚನ್ನಾಪುರ, ಕಿಶೋರ ಮಿಠಾರಿ, ಶಿವಾಜಿ ಅಂಬಡಗಟ್ಟಿ, ಸೆಬ್ಯಾಸ್ಟಿಯನ್ ಸೋಜ, ನಿಂಗೋಜಿ ಸಂಬರಗಿ, ನಾರಾಯಣ ಪಾಟೀಲ, ನೀಲಕಂಠ ಗುಂಜಿಕರ, ರಮೇಶ ವೀರಾಪುರ, ಶಿವಾಜಿ ಅಂಬಡಗಟ್ಟಿ, ನಿತಿನ ಪಾಟೀಲ, ದತ್ತ ಬೀಡಕರ, ರಮೇಶ ವಾಲಿ, ಪುಂಡಲೀಕ ಉಳ್ಳಾಗಡ್ಡಿ, ಸುರೇಶ ಪರಗನ್ನವರ, ಕೃಷ್ಣ ಬಳ್ಳೆನವರ, ಸಿದ್ದರಾಯಿ ಅಂಗಡಿ ಇತರರು ಇದ್ದರು.