Appeal for fulfillment of various demands 
ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಮನವಿ

ಮುಧೋಳ: ಗ್ರಾಮೀಣಾಭಿವೃದ್ಧಿ ನೌಕರರು ತಮ್ಮ 19 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಪಂ ಇಒ ಉಮೇಶ ಸಿದ್ನಾಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಅರುಣ ವಂದಾಲ್ ಮಾತನಾಡಿ, ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ ಈಡೇರಿಸಿಲ್ಲ ಎಂದು ಆರೋಪಿಸಿದರು.

ಪಿಂಚಣಿ ಸೇವೆ, ಸೇವಾ ಹಿರಿತನ, ಭತ್ಯೆ ಹೆಚ್ಚಳ, ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸುವುದು, ಆರೋಗ್ಯ ವಿಮೆ, ಸಹಾಯಕ ಗುಮಾಸ್ತರ ನೇಮಕಾತಿ ಹೀಗೆ ಗ್ರಾಪಂ ನೌಕರರ ಹಲವಾರು ಬೇಡಿಕೆ ಈಡೇರಿಸಲು ಮನವಿ ಮಾಡಿಕೊಳ್ಳಲಾಗಿತ್ತು. ಇದುವರೆಗೂ ಬೇಡಿಕೆ ಈಡೇರಿಸಿಲ್ಲ. ಸರ್ಕಾರ ನಮ್ಮ ಬೇಡಿಕೆ ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಹೊಳೆಬಸು ಮುದ್ದೂರ, ಮಹ್ಮದ್ ರಂಗಾಪುರ, ಮಲ್ಲಯ್ಯ ಗಣಾಚಾರಿ, ಬಾಲೇಶ ಬೆಳಗಲಿ, ಪ್ರಕಾಶ ಕೊಡಬಾಗಿ, ಉಮೇಶ ಮಾದರ, ತಿಮ್ಮಣ್ಣ ತಳವಾರ, ಕೃಷ್ಣಾ ಮಾದರ, ರಾಮಪ್ಪ ಕಳ್ಳಿಮನಿ ಇದ್ದರು.

ತಾಪಂ ಇಒ ಸಿದ್ದಾಳ ಮನವಿ ಸ್ವೀಕರಿಸಿದರು.