ಬೈಲಹೊಂಗಲ: ಪಟ್ಟಣದ ಎಲ್‌ಐಸಿ ಪ್ರತಿನಿಧಿಗಳು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶಾಖಾಧಿಕಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಸ್.ಎನ್.ಸುಂಕದ ಮಾತನಾಡಿ, ವಿಮಾ ಕಂಪನಿ ಪ್ರತಿನಿಧಿಗಳ ಗ್ರ್ಯಾಚ್ಯುಟಿ ಹೆಚ್ಚಿಸಬೇಕು. ಗುಂಪು ವಿಮೆಯನ್ನು ಸುಮಾರು 50 ಲಕ್ಷ ರೂ.ಗೆ ಏರಿಕೆ ಮಾಡಬೇಕು. ಎಲ್‌ಐಸಿ ಪ್ರತಿನಿಧಿಗಳ ವೈದ್ಯಕೀಯ ಸೌಲಭ್ಯ ಹೆಚ್ಚಿಸಬೇಕು. ಕೋವಿಡ್‌ಗೆ ತುತ್ತಾದ ಪ್ರತಿನಿಧಿಗಳ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಪ್ರತಿ ತಿಂಗಳು ಜೀವನೋಪಾಯಕ್ಕಾಗಿ 10 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಎಸ್.ಎಸ್.ಹತ್ತರಕಿ, ಖಜಾಂಚಿ ಎಂ.ಎಂ.ಇಟ್ನಾಳ, ಎಸ್.ಸಿ. ದೇಮನಗೌಡ್ರ, ಪಿ.ಬಿ.ಕಡಕೋಳ, ಜಿ.ಬಿ.ಬೈಲಪ್ಪನವರ, ಐ.ಐ.ಚಬ್ಬಿ, ಎಸ್.ಬಿ.ಶೀಗೀಹಳ್ಳಿ, ಆರ್.ವಿ.ಮಡಿವಾಳರ, ಎಂ.ಎಸ್.ನಾಯಕ, ಎಂ.ಎಸ್. ಹೂಲಿ, ರುದ್ರಯ್ಯ ಹೂಗಾರ, ಅಶೋಕ ಇಟಗಿ, ಎಂ.ಬಿ.ತಲ್ಲೂರ, ಪ್ರಕಾಶ ಹುಂಬಿ, ಸಂತೋಷ ನರಸಣ್ಣವರ, ವಿ.ಬಿ.ಪಟ್ಟಣಶೆಟ್ಟಿ, ಅಪ್ಪಯ್ಯ ವಟಗಣ್ಣವರ, ಪ್ರಕಾಶ ಕಾಜಗಾರ ಉಪಸ್ಥಿತರಿದ್ದರು.