ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು: ವಿದ್ಯುತ್​ ಖಾಸಗೀಕರಣ ವಿರೋಧಿಸಿ ಹೋರಾಟ

ತುಮಕೂರು: ವಿದ್ಯುತ್​ ಖಾಸಗೀಕರಣ ವಿರೋಧಿಸಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್​ ಪಡೆಯಬೇಕು ಎಂದು ಆಗ್ರಹಿಸಿ ರೈತ ಸಂದ ನೇತೃತ್ವದಲ್ಲಿ ನಗರದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್​ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಬೃಹತ್​ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾದರು.

ಕರ್ನಾಟಕ ರಾಜ್ಯ ರೈತ ಸಂದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಲ್ಯಾಣ ರಾಜ್ಯವಾಗಿರುವ ಭಾರತ 56 ಇಂಚಿನ ಎದೆಯ ಪ್ರಧಾನಿಯಿಂದಾಗಿ ಬಂಡವಾಳಶಾಹಿ ರಾಷ್ಟ್ರವಾಗಿ ಬದಲಾಗುತ್ತಿದ್ದು, ಉಸಿರಾಡಲು ಚಳವಳಿ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆ ಮತ್ತು ದೇಶದ ಅಡಳಿತಶಾಹಿ ಆಣತಿಯಂತೆ ನಡೆದುಕೊಳ್ಳುತ್ತಿರುವ ಪ್ರಧಾನಿಗಳು ಸೇವಾ ೇತ್ರದಲ್ಲಿದ್ದ ಬಹುತೇಕ ಇಲಾಖೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಕೃಷಿಯ ಬದಲಾಗಿ ಕೈಗಾರಿಕೆಯನ್ನು ಆದ್ಯತಾ ವಲಯವಾಗಿ ಪರಿಗಣಿಸಿದ ಪರಿಣಾಮ ಮುಂದೊಂದು ದಿನ ಆಹಾರಕ್ಕಾಗಿ ದೇಶದ ಬಡವರು ಹಾಹಾಕಾರ ಪಡುವಂತಾಗಲಿದೆ ಎಂದರು.

ಚಳವಳಿ ಎಂಬುದು ಈ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಇರಬಹುದಾದ ಸಾಮಾನ್ಯ ಅಂಶ ಆದರೆ, ದೇಶದಲ್ಲಿ ನಿರುದ್ಯೋಗ, ಬಡತನ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕೋಮುವಾದ ತಾಂಡವಾಡುತಿದೆ ಎಂದರು.

ಒಂದು ಕಾಲದಲ್ಲಿ ರೈತರನ್ನು ವಿರೋಧಿಸುತ್ತಿದ್ದ ವಿದ್ಯುತ್​ ಗುತ್ತಿಗೆದಾರರು ತಮ್ಮ ಅಸ್ಥಿತ್ವಕ್ಕಾಗಿ ಇಂದು ರೈತರೊಂದಿಗೆ ಸೇರಿದ್ದಾರೆ. ಖಾಸಗೀಕರಣವಾದರೆ ಒಂದು ಕಂಪನಿಯ ಗುಲಾಮರಾಗುವ ನೌಕರರೂ ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಸೇರುವುದರಲ್ಲಿ ಅನುಮಾನವಿಲ್ಲ. ನಾವೆಲ್ಲ ಸೇರಿ ಹೋರಾಟ ರೂಪಿಸಿದರೆ ವಿದ್ಯುತ್​ ಖಾಸಗೀಕರಣ ತಡೆಯಬಹುದು ಎಂದರು.

ರಸಗೊಬ್ಬರ, ಬಿತ್ತನೆ ಬೀಜದ ಬೆಲೆ ದುಪ್ಪಟ್ಟಾದರೂ ವ್ಯವಸಾಯ ಮಾಡಿದ ರೈತನಿಗೆ ವೈಜ್ಞಾನಿಕ ಬೆಲೆ ಬೇಡ, ಕನಿಷ್ಠ ಬೆಂಬಲ ಬೆಲೆ ನೀಡದ ಪರಿಣಾಮ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸರ್ಕಾರ ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರಾಜ್ಯದಲ್ಲಿ 88 ಎಪಿಎಂಸಿಗಳು ಅದಾಯವಿಲ್ಲದೆ ಮುಚ್ಚುವ ಹಂತ ತಲುಪಿವೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಕಿತ್ತೊಗೆಯಿರಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜಾರಿಗೆ ತಂದಿರುವ ಹಲವು ಯೋಜನೆಗಳು ಜನವಿರೋಧಿ, ರೈತ ವಿರೋಧಿಯಾಗಿದ್ದು, ಮತದಾರರು ಹಣ, ಹೆಂಡ, ಜಾತಿಗೆ ಮಾರು ಹೋಗದೆ ಇಂತಹ ಕೆಟ್ಟ ಸರ್ಕಾರ ಕಿತ್ತೊಗೆಯಬೇಕು ಎಂದು ರಾಜ್ಯ ರೈತ ಸಂದ ಕಾರ್ಯಾಧ್ಯಕ್ಷ ಎ.ಗೋವಿಂದರಾಜು ಕರೆಕೊಟ್ಟರು.

ಸರ್ಕಾರ ರೈತರ ಪಂಪ್​ಸೆಟ್​ಗಳಿಗೆ ಮೀಟರ್​ ಅಳವಡಿಸಲು ಮುಂದಾದರೆ 4.75 ಲಕ್ಷ ಐಪಿಸೆಟ್​ ಹೊಂದಿರುವ ರೈತರು ಒಗ್ಗೂಡಿ ಬೀದಿಗೆ ಇಳಿಯಲಿದ್ದೇವೆ. ನಿಮ್ಮ ಸರ್ಕಾರವನ್ನು ಕಿತ್ತೊಗೆಯಲಿದ್ದೇವೆ ಎಂದು ಎಚ್ಚರಿಸಿದರು.

ವಿದ್ಯುತ್​ ಗುತ್ತಿಗೆದಾರರ ಸಂದ ಕೇಂದ್ರೀಯ ಸಮಿತಿ ಅಧ್ಯಕ್ಷ ಮಲ್ಲಯ್ಯ ಮಾತನಾಡಿ, ಬೆಸ್ಕಾಂನಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. 2015ರಲ್ಲಿ ಅಕ್ರಮ, ಸಕ್ರಮದಲ್ಲಿ ವಿದ್ಯುತ್​ ಸಂಪರ್ಕಕ್ಕೆ ಅರ್ಜಿ ಹಾಕಿ, ಹಣಕಟ್ಟಿದವರು ಇನ್ನೂ ಕಾಯುತ್ತಿದ್ದಾರೆ. ಆದರೆ, ಹಣ ನೀಡಿದರೆ ಉಳಿದವರಿಗೆ ಒಂದೇ ದಿನದಲ್ಲಿ ಸಂಪರ್ಕ ನೀಡಲಾಗುತ್ತಿದೆ ಎಂದು ದೂರಿದರು. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಂಬಗಳು ಮುರಿದು ಹೋಗಿವೆ, ಅವುಗಳನ್ನು ಬದಲಾಯಿಸುವ ಕೆಲಸವನ್ನು ಸಹ ಖಾಸಗೀಯವರಿಗೆ ನೀಡಲಾಗಿದೆ. ರೈತರಿದ್ದರೆ ನಾವು ಹಾಗಾಗಿ ಕೃಷಿಕರೊಂದಿಗೆ ಸೇರಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು. ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿ ಕಳುಹಿಸಿದರು.

ಬೃಹತ್​ ಮೆರವಣಿಗೆ: ತುಮಕೂರಿನ ಬಿಜಿಎಸ್​ ವೃತ್ತದಿಂದ ಆರಂಭವಾದ ರೈತರ ಬೃಹತ್​ ಪ್ರತಿಭಟನೆ ಬಿ.ಎಚ್​.ರಸ್ತೆ ಮೂಲಕ ಬೆಸ್ಕಾಂ ಕಚೇರಿವರೆಗೆ ಸಾಗಿ ಬಂದಿತು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ,ರಾಜ್ಯ ಕಾರ್ಯದರ್ಶಿ ರವಿಕಿರಣ್​ ಪೂಣಚ್ಚ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ, ರಾಜ್ಯ ಕಾರ್ಯಾಧ್ಯಕ್ಷ ಜಿ.ಎಂ.ವೀರಸಂಗಯ್ಯ, ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ವಿಭಾಗೀಯ ಚೌಕೀಮಠ್​, ಯುವ ಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ರಾಜ್ಯ ಕಾರ್ಯದರ್ಶಿ ಗೋಪಾಲ್​, ಜಿಲ್ಲಾ ಸಂಟನಾ ಕಾರ್ಯದರ್ಶಿ ರವೀಶ್​, ಗುತ್ತಿಗೆದಾರರ ಸಂದ ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಉಪಾಧ್ಯಕ್ಷ ಜಗದೀಶ್​, ಪ್ರಧಾನ ಕಾರ್ಯದರ್ಶಿ ದಾದಾಪೀರ್​ ಇದ್ದರು.

ಸಚಿವ ಜೆ.ಸಿ.ಮಾಧುಸ್ವಾಮಿ ಚಿಕ್ಕನಾಯನಹಳ್ಳಿಗೆ ಮಂತ್ರಿ ಎಂಬಂತೆ ವರ್ತಿಸಿ, ಇಡೀ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಹೇಮಾವತಿ, ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಬಿಕ್ಕೆಗುಡ್ಡ, ಹಾಗಲವಾಡಿ ಕುಡಿಯುವ ನೀರಿನ ಯೋಜನೆಗಳು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿವೆ. > ಎ.ಗೋವಿಂದರಾಜು ಕಾರ್ಯಾಧ್ಯಕ್ಷ, ರಾಜ್ಯ ರೈತ ಸಂ