ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿ ಪಿಂಚಣಿದಾರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಯ ಪಿಂಚಣಿದಾರರ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಜಯಲಕ್ಷ್ಮೀಪುರಂನಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನಾಕಾರರು, ಮಾನವ ಸರಪಳಿ ನಡೆಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಫೆನ್ಷನ್ ಕಾಯ್ದೆಗಳನ್ನು ಕ್ರಮಬದ್ಧಗೊಳಿಸುವಿಕೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು. 8ನೇ ಕೇಂದ್ರ ವೇತನ ಆಯೋಗವನ್ನು ಶೀಘ್ರವೇ ರಚನೆ ಮಾಡಬೇಕು. ಬಿಎಸ್‌ಎನ್‌ಎಲ್ ಮತ್ತು ಸ್ವಾಯತ್ತ ಸಂಸ್ಥೆಗಳ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಯನ್ನು 8ನೇ ಕೇಂದ್ರ ವೇತನ ಆಯೋಗದ ಉಲ್ಲೇಖ ವಿಷಯದಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ಪರಮೇಶ್ವರಯ್ಯ, ಸಿ.ಆರ್.ಕೃಷ್ಣಮೂರ್ತಿ, ಎಸ್.ವಿಷಕಂಡಮೂರ್ತಿ, ರಾಜಶೇಖರ್, ಬಸವರಾಜು, ಡಾ.ಚಂದ್ರಶೇಖರ್, ಪ್ರೊ.ಜಗನ್ನಾಥ್, ಗೋಪಾಲಕೃಷ್ಣ, ಡಿಸಿಎಸ್ ರಾವ್, ಎಸ್.ಬಿ.ಬಲರಾಮ್, ಎಸ್.ಶ್ರೀಧರ್, ವೃಷಭರಾಜ್, ಜಿ.ಜಯರಾಮ್, ಪಾರ್ಥಸಾರಥಿ, ಎನ್.ಕೆ.ಬಾಲಾಜಿರಾವ್, ಉಮಾಕಾಂತ್, ರಾಜಗೋಪಾಲ್ ಇನ್ನಿತರರಿದ್ದರು.