ಪರಶುರಾಮಪುರ: ಸಮೀಪದ ಯಲಗಟ್ಟೆ ಮಜುರೆ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಚಿತ್ರಲಿಂಗೇಶ್ವರಸ್ವಾಮಿ, ವೀರಸಿರಿಯಣ್ಣ ಹಾಗೂ ಕದಿರಿನರಸಿಂಹಸ್ವಾಮಿ ದೇವರುಗಳ ಗರ್ಭಗುಡಿಯ ಚಾವಣಿಯಲ್ಲಿ ನವರಂಗ ಶಿಲೆಗಳನ್ನು ಮೇಲಿರಿಸುವ ಶುಭಕಾರ್ಯದ ಅಂಗವಾಗಿ ದೇವಸ್ಥಾನ ಕಟ್ಟಡದ ಬಳಿ ಆ.28ರಂದು ಬೆಳಗ್ಗೆ 10ಕ್ಕೆ ಅಗ್ರಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಅಂದು ಸ್ವಾಮಿಗೆ ಮಹಾಮಂಗಳಾರತಿ ಸೇವೆ, ಭಕ್ತರಿಗೆ ತೀರ್ಥಪ್ರಸಾದ ವಿತರಣೆ ನಂತರ ನೆರೆದ ಎಲ್ಲ ಭಕ್ತರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತರು ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.