ಜಿಲ್ಲೆ

ವಿವಿಧ ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕ ಬಸವಂತಪ್ಪ

ದಾವಣಗೆರೆ: ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಿದರು. ಅಧಿಕಾರಿಗಳ ಕರೆ ಮಾಡಿ ಪರಿಹಾರ ಒದಗಿಸಲು ಸೂಚಿಸಿದರು.

ಹೊನ್ನೂರು ಗ್ರಾಮದ ಕೆರೆ ಪರಿಶೀಲನೆ ನಡೆಸಿದರು. ಎಚ್.ಕಲಪನಹಳ್ಳಿ, ಚಟ್ಟೋಬನಹಳ್ಳಿಗಳಲ್ಲಿ ಕೋಳಿ ಫಾರ್ಮ್‌ಗಳಿಗೆ ತೆರಳಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಫಾರ್ಮ್‌ನಿಂದ ಬರುವ ತ್ಯಾಜ್ಯವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕು. ಜನರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಮಾಲೀಕರಿಗೆ ಸೂಚನೆ ನೀಡಿದರು.

ಐಗೂರು ಗೊಲ್ಲರಹಟ್ಟಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ತೆರಳಿ ಶಾಲೆಯ ಸುಸ್ಥಿತಿ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಮಾಹಿತಿ ಪಡೆದರು. ಉತ್ತಮ ಶಿಕ್ಷಣ, ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ಎಂಬುದಕ್ಕೆ ಮಕ್ಕಳಿಂದ ಉತ್ತರ ಪಡೆದರು. ಸರ್ಕಾರ ಶಿಕ್ಷಣಕ್ಕಾಗಿ ಹಲವು ಸೌಲಭ್ಯ ಕೊಡುತ್ತಿದೆ. ಇವು ಸದ್ಬಳಕೆಯಾಗಬೇಕು ಎಂದು ಶಿಕ್ಷಕರಿಗೆ ಹೇಳಿದರು.

ಹೊನ್ನೂರು ಗ್ರಾಪಂ ಮಾಜಿ ಸದಸ್ಯ ಬಸಣ್ಣ, ಹೊನ್ನೂರು ಪ್ರಕಾಶ್, ಸಂತೋಷ್, ಮಂಜುನಾಥ್, ವೀರಣ್ಣ, ಕಂದಾಯ ಅಧಿಕಾರಿ ಚಂದ್ರಪ್ಪ, ಪಿಡಿಒ, ನಿಂಗಪ್ಪ, ಹನುಮಂತಪ್ಪ, ಅಗಸನಕಟ್ಟೆ ಭೀಮಣ್ಣ, ತುಂಬಿಗೆರೆ ಅಂಜಿನಪ್ಪ, ಐಗೂರು ಚಂದ್ರಪ್ಪ, ಬೋರಗೊಂಡನಹಳ್ಳಿ ಹಾಲೇಶ್, ನಿಂಗಾಪೂರ ಮಂಜಣ್ಣ, ಎ.ಕೆ.ಮಂಜಪ್ಪ, ಕಾಂಗ್ರೆಸ್ ಮುಖಂಡ ಹನುಮಂತಪ್ಪ ಇದ್ದರು.

---