ಮುಧೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಶಿಕಾಂತಗೌಡ ಪಾಟೀಲ ಪಾದಯಾತ್ರೆ ನಡೆಸಿ ಮತಯಾಚಿಸಿದರು. 
ಜಿಲ್ಲೆ

ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ

ಮುಧೋಳ: ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸೆಪ್ಟೆಂಬರ್ 1ರಂದು ಚುನಾವಣೆ ನಡೆಯಲಿದೆ.

ನಾವಣೆಗೆ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಹಾಗೂ ಅವರ ಗುಂಪಿನ ಅಭ್ಯರ್ಥಿಗಳು ಬಾಗಲಕೋಟೆ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.

ನಂತರ ಸುದ್ದಿಗಾರರೊಂದಿಗೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಮಾತನಾಡಿ, ನಂದಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿ ನಂಬರ್ 1 ಸಹಕಾರಿ ಕಾರ್ಖಾನೆ ಎಂದು ಹೆಸರು ಮಾಡಿದೆ.

ಕಬ್ಬು ಪೂರೈಸಿದ ರೈತರಿಗೆ ಸಕಾಲಕ್ಕೆ ಹಣ ಪಾವತಿ ಮಾಡಲಾಗುತ್ತದೆ. ರೈತರ ಅನುಕೂಲಕ್ಕಾಗಿ ಬೀಜ-ಗೊಬ್ಬರ ಪೂರೈಸಲಾಗುತ್ತದೆ .ನಂದಿ ಕಾರ್ಖಾನೆ ಬಾಗಲಕೋಟೆ-ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ ಎಂದು ಮಾಹಿತಿ ನೀಡಿದರು.

ಸಹಕಾರಿ ಕಾರ್ಖಾನೆಗಳು ರೈತರ ಹಿತ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಾರ್ಖಾನೆ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವ ಅವಶ್ಯವಿದೆ ಎಂದು ಅವರು ಹೇಳಿದರು.

ಒಟ್ಟು 17 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎರಡು ಜಿಲ್ಲೆಗಳ ವ್ಯಾಪ್ತಿಯಲ್ಲಿ 9000 ಷೇರುದಾರರಿದ್ದಾರೆ. ನನ್ನ ನೇತೃತ್ವದ ತಂಡದಲ್ಲಿ ಎಚ್.ಆರ್.ಬಿರಾದಾರ, ಕುಮಾರ ಕೋಣಪ್ಪನವರ, ರಮೇಶ ಜಕರೆಡ್ಡಿ, ರಾಮಣ್ಣ ಸೆವಾನಿ, ಮಹಾದೇವ ನ್ಯಾಮಗೌಡ, ಸತ್ಯಪ್ಪ ಒಂಟಿ ,ಚನ್ನಪ್ಪ ಸರಶೆಟ್ಟಿ ಹನುಮಂತ ಕೊಣ್ಣೂರ,, ಶಂಕರ ಶಿರಬೂರ, ರಮೇಶ ಬಡ್ರಿ, ಚೆನ್ನಪ್ಪ ಜಮಖಂಡಿ, ರಂಗನಗೌಡ ನಾಯಕ, ಗುರುಲಿಂಗಪ್ಪ ಅಂಗಡಿ, ರತ್ನವ್ವ ಬಿರಾದಾರ, ಲಕ್ಷ್ಮೀಬಾಯಿ ದೊಡ್ಡಮನಿ ಇದ್ದಾರೆ. ಜನಪರ ಸೇವಾ ಮನೋಭಾವದ ಎಲ್ಲ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಶಶಿಕಾಂತಗೌಡ ಪಾಟೀಲ ಮನವಿ ಮಾಡಿದರು.