ಜಿಲ್ಲೆ

ವಿವಿಧ ಗ್ರಾ.ಪಂ.ಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ಹನೂರು: ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಯನ್ನು ಹೊರತುಪಡಿಸಿ 24 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 2ನೇ ಅವಧಿಯ ಚುನಾವಣೆಯು ಜು.26 ರಿಂದ 31 ರವರೆಗೆ ನಡೆಯಲಿದೆ.


ಜು.26 ರಂದು ಮಂಗಲ, ಬಂಡಳ್ಳಿ, ಶಾಗ್ಯ, ಗೋಪಿನಾಥಂ, ಪೊನ್ನಾಚಿ, 27 ರಂದು ಸೂಳೇರಿಪಾಳ್ಯ, ಕಣ್ಣೂರು, ಲೊಕ್ಕನಹಳ್ಳಿ, ಹುತ್ತೂರು, ಮಣಗಳ್ಳಿ, ಅಜ್ಜೀಪುರ, ಮಾರ್ಟಳ್ಳಿ, ಕೌದಳ್ಳಿ, 28 ರಂದು ಚಿಕ್ಕಮಾಲಾಪುರ, ಪಿ.ಜಿ. ಪಾಳ್ಯ, ಬೈಲೂರು, ರಾಮಾಪುರ, ದಿನ್ನಳ್ಳಿ, ಹೂಗ್ಯಂ, ಮಿಣ್ಯ, ಶೆಟ್ಟಳ್ಳಿ, ದೊಡ್ಡಲತ್ತೂರು, ಎಲ್ಲೇಮಾಳ ಹಾಗೂ 31 ರಂದು ಮಲೆಮಹದೇಶ್ವರ ಬೆಟ್ಟ ಗ್ರಾಪಂನಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾಧಿಕಾರಿಯನ್ನು ನೇಮಕ ಮಾಡಲಾಗಿದೆ.


ಮಂಗಲ ಗ್ರಾಮ ಪಂಚಾಯಿತಿಗೆ ಕಾವೇರಿ ನೀರಾವರಿ ನಿಗಮದ ಎಇಇ ಯಶವಂತ್‌ಗೌಡ, ಮಣಗಳ್ಳಿಗೆ ಕಾವೇರಿ ನೀರಾವರಿ ನಿಗಮದ ಎಇ ಎಲ್. ಅಶೋಕ್, ಬಂಡಳ್ಳಿ ಪಂಚಾಯಿತಿಗೆ ಕಾವೇರಿ ನೀರಾವರಿ ನಿಗಮದ ಎಇಎಸ್ ಬಸವೇಶ್, ಶಾಗ್ಯ ಪಂಚಾಯಿತಿಗೆ ಕಾವೇರಿ ನೀರಾವರಿ ನಿಗಮದ ಎಇಇ ಮಂಜುನಾಥ್, ಎಲ್ಲೇಮಾಳಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ಅಜ್ಜೀಪುರಕ್ಕೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್, ಸೂಳೇರಿಪಾಳ್ಯಕ್ಕೆ ಕಾವೇರಿ ನೀರಾವರಿ ನಿಗಮದ ಎಇ ನವೀನ್, ರಾಮಾಪುರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎನ್ ಸಿದ್ದರಾಜು, ಕೌದಳ್ಳಿಗೆ ಪಂಚಾಯತ್‌ರಾಜ್ ಇಲಾಖೆಯ ಜೆಇ ಮನೋಜ್, ದೊಡ್ಡಲತ್ತೂರು ಕಾವೇರಿ ನೀರಾವರಿ ನಿಗಮದ ಎಇ ರಮೇಶ್, ಶೆಟ್ಟಳ್ಳಿಗೆ ಸಹಕಾರ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಮೊಹಮ್ಮದ್ ನದೀಂ, ಮಾರ್ಟಳ್ಳಿಗೆ ಸಹಕಾರ ಇಲಾಖೆಯ ಸಹಾಯಕ ನಿರ್ದೇಶಕಿ ರಾಧಾ, ಪೊನ್ನಾಚಿಗೆ ಪಿಡಬ್ಲುೃಡಿ ಇಲಾಖೆಯ ಎಇಇ ಸತೀಶ್, ಹೂಗ್ಯಂ- ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಶಿವರಾಜು, ದಿನ್ನಳ್ಳಿಗೆ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಕನಕರಾಜು, ಮಿಣ್ಯಂಗೆ ಕೆಆರ್‌ಐಡಿಎಲ್ ಸಹಾಯಕ ನಿರ್ದೇಶಕ ಚಿಕ್ಕಲಿಂಗಯ್ಯ, ಕಣ್ಣೂರುಗೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪೂರ್ಣಿಮಾ, ಚಿಕ್ಕಮಾಲಾಪುರಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಗಂಗಾಧರ್, ಲೊಕ್ಕನಹಳ್ಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಂ ನವೀನ್ ಮಠದ್, ಪಿಜಿ ಪಾಳ್ಯಕ್ಕೆ ಕಾವೇರಿ ನೀರಾವರಿ ನಿಗಮದ ಎಇಇ ಹಲೀಮಾ, ಹುತ್ತೂರಿಗೆ ಕಾವೇರಿ ನೀರಾವರಿ ನಿಗಮದ ಎಇಇ ಪುಣ್ಯಶ್ರೀ, ಬೈಲೂರಿಗೆ ಲೋಕೋಪಯೋಗಿ ಇಲಾಖೆಯ ಎಇಇ ಮಹೇಶ್, ಮಹದೇಶ್ವರಬೆಟ್ಟಕ್ಕೆ ಲೋಕೋಪಯೋಗಿ ಇಲಾಖೆಯ ಎಇ ಸತೀಶ್‌ಚಂದ್ರ, ಗೋಪಿನಾಥಂ ಗ್ರಾಮಪಂಚಾಯತ್‌ಗೆ ಲೊಕೋಪಯೋಗಿ ಇಲಾಖೆಯ ಎಇ ಮಹದೇವಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.