ಜಿಲ್ಲೆ

ವಿವಿಧ ಕ್ಷೇತ್ರದವರಿಗೆ ರಾಯಣ್ಣ, ಕಿತ್ತೂರು ರಾಣಿ ಪ್ರಶಸ್ತಿ ಪ್ರದಾನ

ಮೈಸೂರು: ಮೈಸೂರು ಕನ್ನಡ ವೇದಿಕೆಯಿಂದ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಜನ್ಮೋತ್ಸವ ಜಯಂತಿ ಅಂಗವಾಗಿ ಶನಿವಾರ ನಗರದ ಸ್ವಾತಂತ್ರೃ ಹೋರಾಟಗಾರರ ಉದ್ಯಾನದಲ್ಲಿ ವಿವಿಧ ಕ್ಷೇತ್ರದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯೋಧರಾದ ದೇವೇಂದ್ರ ತನಗಿ, ಲಕ್ಷ್ಮಪ್ಪ, ಲಾಲು ಕುಮಾರ್, ನಂಜೇಗೌಡ, ಪತ್ರಕರ್ತ ಬೀರೇಗೌಡ, ಕ್ರೀಡಾ ಕ್ಷೇತ್ರದ ಖುಷಿ, ಪ್ರಾಣೇಶ್, ಸಮಾಜ ಸೇವಕಿ ಶಶಿಕಲಾ, ದಿವ್ಯ, ರೇಖಾ, ಸಹಕಾರ ಕ್ಷೇತ್ರದ ಡಿ ಬಸವರಾಜು, ಸಮಾಜ ಸೇವಕರಾದ ಪೃಥ್ವಿ, ಸಂಗೊಳ್ಳಿ ಅವರಿಗೆ ರಾಯಣ್ಣ ಮತ್ತು ಕಿತ್ತೂರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಮಾಜ ಸೇವಕ ಹರೀಶ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ನಾನಾ ರೀತಿಯ ಯುದ್ಧ ತಂತ್ರಗಳನ್ನು ಬಳಸಿ ಬ್ರಿಟಿಷರಿಗೆ ಸಿಂಹ ಸ್ವಪ್ನ ಆಗಿದ್ದರು. ಇವರ ಪ್ರೇರಿತ ಶಕ್ತಿಯಾದ ರಾಣಿ ಚೆನ್ನಮ್ಮ ಅವರು ನಾನಾ ಕಿರುಕುಳ ಕೊಟ್ಟರು ಯಾವುದಕ್ಕೂ ಅಂಜದೇ ಈ ನಾಡಿನ ಪರ ನಿಂತ ಧೀಮಂತ ಶಕ್ತಿ ಎಂದರು.
ಸನ್ಮಾನಿತರ ಪರ ಮಾತನಾಡಿದ ಯೋಧ ದೇವಂಗೆ ತೆನಗಿ ಮಾತನಾಡಿ, ಯಾವುದೇ ದೇಶಕ್ಕೆ ಸೈನಿಕರು ಅಮೂಲ್ಯ ಆಸ್ತಿ. ಎಂಥಹ ಸನ್ನಿವೇಶದಲ್ಲಿದ್ದರೂ ದೇಶದ ಹಿತ ಕಾಯುವ ಕಾರ್ಯ ಮಾಡುತ್ತಲೇ ಬರುತ್ತಿದ್ದಾರೆ. ಇಂತಹ ಸೈನಿಕರನ್ನು ಗುರುತಿಸುವುದು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೀಡಾಪಟು ಶ್ರೀಷಾಭಟ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯ ರವಿ ನಾಲಾ ಬೀದಿ, ಬೋಗಾದಿ ಸಿದ್ದೇಗೌಡ, ಎಲ್ಐಸಿ ಸಿದ್ದಪ್ಪ, ಬಾಲಕೃಷ್ಣ, ಸಾಲುಂಡಿ ದೊರೆಸ್ವಾಮಿ, ಗುರುಬಸಪ್ಪ, ಮದನ್, ಪುಷ್ಪ, ಮಾದಪ್ಪ, ಬೀಡಾ ಬಾಬು, ಮಾಲಿನಿ ಇತರರು ಇದ್ದರು.