ಮೈಸೂರು: ಉತ್ತಮ ಸಂಸ್ಕೃತಿ, ಸಾಧನೆ ಮಾಡಿದರೆ ಸನ್ಮಾನ, ಬಿರುದುಗಳು ತಾವೇ ಅರಸಿ ಬರುತ್ತವೆ ಎಂದು ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಭಿಪ್ರಾಯಪಟ್ಟರು.
ಶ್ರೀನಟರಾಜ ಪ್ರತಿಷ್ಠಾನ ಹಾಗೂ ವೆಂಕಟಗಿರಿ ಪ್ರಕಾಶನದಿಂದ ನಗರದ ಹೊಸಮಠದ ಶ್ರೀನಟರಾಜ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ಕ್ಷೇತ್ರದ ಗಣ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಬೇಕಲ್ಲದೇ ಸಾಹಿತ್ಯ, ಕಲೆ, ಸಂಸ್ಕೃತಿ ಮೈಗೂಢಿಸಿಕೊಳ್ಳಬೇಕು.ಉತ್ತಮ ಸಂಸ್ಕೃತಿ ಬೆಳೆಸಿಕೊಂಡು ಸಾಧನೆ ಮಾಡಿದರೆ ಮಾತ್ರ ಮುಂದೊಂದು ದಿನ ಅಭಿನಂದನೆಗೆ ಅರ್ಹರಾಗುತ್ತೀರಿ. ಸನ್ಮಾನ, ಬಿರುದುಗಳು ನಿಮ್ಮನ್ನು ಅರಸಿ ಬರುತ್ತವೆ ಎಂದರು.
ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ ಅವರು, ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜು ಇತರೆ ಎಲ್ಲ ಸಂಸ್ಕೃತ ಪಾಠ ಶಾಲೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮಾಜಿ ಮೇಯರ್ ಸುನಂದಾ ಪಾಲನೇತ್ರ ಮಾತನಾಡಿ, ಸನ್ಮಾನ ಎಂಬುದು ಎಲ್ಲರಿಗೂ ದೊರೆಯುವುದಲ್ಲ, ಸತತ ಪರಿಶ್ರಮ, ಪ್ರಯತ್ನ, ತಾಳ್ಮೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವವರಿಗೆ ಮಾತ್ರ ಸಲ್ಲುವಂತದ್ದು ಎಂದರು.
ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ ಮಾತನಾಡಿ, ಅಕ್ಕಮಹಾದೇವಿ, ಬುದ್ಧ, ಬಸವಣ್ಣ, ಸ್ವಮಿ ವಿವೇಕಾನಂದರ ವಿಚಾರಧಾರೆಗಳಿಗೆ ನಾವು ಇಂದಿಗೂ ಗೌರವ ನೀಡುತ್ತಿದ್ದೇವೆ. ಆದ್ದರಿಂದ ಸಮಾಜವು ನಾವು ಮಾಡಿರುವ ಒಳ್ಳೆಯ ಕೆಲಸಗಳನ್ನು ಗುರುತಿಸುತ್ತದೆ ಎನ್ನುವುದನ್ನು ಇದು ಸಾಕ್ಷಿ. ಉತ್ತಮ ಸಮಾಜ ನಿರ್ಮಾಣ ಇಂದಿನ ಯುವ ಜನರ ಕೈಯಲ್ಲಿದೆ. ಉತ್ತಮ ಸಮಾಜ ನಿರ್ಮಾಣದಿಂದ ಪ್ರಬುದ್ಧ ಭಾರತದೆಡೆಗೆ ನಾವು ಸಾಗಬೇಕಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎಂ.ಮಹದೇವಯ್ಯ ಮಾತನಾಡಿ, ಭಾರತ ಹಿಂದಿನಿಂದಲೂ ವಿದ್ಯಾ ಕ್ಷೇತ್ರಕ್ಕೆ ಹೆಚ್ಚನ ಪ್ರಾಶಸ್ತ್ಯ ನೀಡುತ್ತಾ ಬಂದಿದೆ. ಇದರ ಉಪಯೋಗ ಪಡೆದುಕೊಂಡು ಎಲ್ಲರೂ ವಿದ್ಯಾವಂತರಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಪಂಚದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಭಾರತ ಮೊದಲನೇ ಸ್ಥಾನ ಪಡೆದಿದ್ದು, ಇತರರಿಗೆ ಮಾದರಿ ರಾಷ್ಟ್ರವಾಗಿದೆ. ಅಹಿಂಸೆಯೇ ಪರಮ ಧರ್ಮವಾಗಬೇಕು ನಮ್ಮ ಧರ್ಮ ನಿಂತಿರುವುದೇ ವೇದದ ಆಧಾರದ ಮೇಲೆ.ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸಬೇಕು ಎಂದು ಹೇಳಿದರು.
ನಗರಪಾಲಿಕೆ ಉಪ ಆಯುಕ್ತ ಡಾ. ದಾಸೇಗೌಡ ಮಾತನಾಡಿ, ದಸರಾ ಕವಿಗೋಷ್ಠಿ ಅಂಗವಾಗಿ ಚಿಗುರು ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು, ಕವನದೊಂದಿಗೆ ಹೆಸರು ನೋಂದಾಯಿಸವಂತೆ ಸಲಹೆ ಮಾಡಿದರು.
ಶ್ರೀನಟರಾಜ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಚಿದಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ವೆಂಕಟಗಿರಿ ಪ್ರಕಾಶನ ಸಂಸ್ಥಾಪಕರಾದ ಪ್ರೊ.ನೀ. ಗಿರಿಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪಸನ್ನಕುಮಾರ್, ಶ್ರೀನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವಿ.ಡಿ. ಸುನೀತಾರಾಣಿ, ಉಪನ್ಯಾಸಕರಾದ ಬಿ. ರಾಧಾ,ಎಸ್. ವೇದಾವತಿ, ಬೋಗಾದಿ ಸಿದ್ದೇಗೌಡ, ಎಚ್.ಆರ್. ಭದ್ರೇಶ್‌ಕುಮಾರ್ ಇತರರು ಇದ್ದರು.
ವಿವಿಧ ಕ್ಷೇತ್ರದವರಿಗೆ ಸನ್ಮಾನ:
ವಿಶ್ರಾಂತ ಪ್ರಾಧ್ಯಾಪಕ ವೈ.ಸಿ. ನಂಜುಂಡಯ್ಯ, ಸಮಾಜ ಸೇವಕ ಕೆ. ರಘುರಾಂ, ಸುತ್ತೂರು ಪಂಚಾಂಗಕರ್ತ ಕೆ.ಜಿ. ಪುಟ್ಟಹೊನ್ನಯ್ಯ, ಸಾಹಿತಿ ನಾಗರತ್ನ ಹೆಮ್ಮಿಗೆ, ಕೇಬಲ್ ಉದ್ಯಮಿ ವೆಂಕಟೇಶ್, ಕರ್ನಾಟಕ ಸಂಸ್ಕೃತ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಬಿ. ಅನುಪಮಾ, ಸಂಸ್ಕೃತ ಪಾಠಶಾಲೆಗಳ ಪರಿವೀಕ್ಷಕ ಮಲ್ಲಣ್ಣ, ಆರ್ಚಕ ವಿದ್ವಾನ್ ಎಸ್.ಕೃಷ್ಣಮೂರ್ತಿ, ಭಾರತ ಕನ್ನಡ ಪರಿಷತ್ತು ರಾಜ್ಯಾಧ್ಯಕ್ಷ ರಾಜಾಧ್ಯಕ್ಷ ರಾಘವೇಂದ್ರಕುಮಾರ್, ನಿವೃತ್ತ ಮುಖ್ಯ ಶಿಕ್ಷಕಿ ಸುನಂದಾ ಭೂಪಾಲಿ, ವಿವಿಧ ಕ್ಷೇತ್ರದ ಡಾ.ಸುನಂದ ಭೂಪಾಲಿ. ಪುರೋಹಿತರಾದ ವಿದ್ವಾನ್ ಚಂದ್ರಶೇಖರಯ್ಯ ಅವರಿಗೆ ಮೇರುಗಿರಿ ಪ್ರಶಸ್ತಿ ನೀಡಲಾಯಿತು.
ಇದೇ ವೇಳೆ ವೆಂಟಗಿರಿ ಪ್ರಕಾಶನದ ಸಂಸ್ಥಾಪಕ ಪೊ.ನೀ.ಗಿರಿಗೌಡ, ಪುಷ್ಪಾ ಅಯ್ಯಂಗಾರ್, ವೈದೇಹಿ, ಇಳೈ ಆಳ್ವಾರ್ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.