ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿದ್ಯಾರ್ಥಿಗಳು ವಿವಿಧ ಕೌಶಲಗಳನ್ನು ಕಲಿತು ಉದ್ಯಮಶೀಲರಾಗುವತ್ತ ಹೆಜ್ಜೆ ಇಡಬೇಕು ಎಂದು ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್.ಎಚ್. ಹೇಳಿದರು.
ಆಪೇರಲ್ ಟ್ರೖೆನಿಂಗ್ ಆಂಡ್ ಡಿಸೈನ್ ಸೆಂಟರ್ (ಎಟಿಡಿಸಿ) ವತಿಯಿಂದ ಆಯೋಜಿಸಿದ್ದ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಡಾಕ್ ಜಂಟಿ ನಿರ್ದೇಶಕ ಸಿ. ಎಚ್. ಅಂಗಡಿ ಮಾತನಾಡಿ, ಮಹಿಳೆಯರು ವಿವಿಧ ಕೌಶಲಗಳ ತರಬೇತಿ ಪಡೆದು ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ವಿನಾಯಕ ಜೋಶಿ ಇಲಾಖೆಯ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಾಸನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಾಚಾರ್ಯು ಮಂಜುಳಾ ಕದಂ ಮಾತನಾಡಿದರು. ಅಂಬಿಕಾ ಶೇಟ್ ಸ್ವಾಗತಿಸಿದರು. ಸುನೀತಾ ವಿ. ಎಟಿಡಿಸಿ ಬಗ್ಗೆ ಮಾಹಿತಿ ನೀಡಿದರು. ಮಂಜುಳಾ ಶಿಂದೆ ವರದಿ ವಾಚಿಸಿದರು. ಜ್ಯೋತಿ ಅಗಡಿ ವಂದಿಸಿದರು.
ವಿವಿಧ ಇಲಾಖೆಗಳಡಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ನೀಡಿದ ಸುಂದರವಾದ ವಸ್ತ್ರವಿನ್ಯಾಸ ಮತ್ತು ಉಡುಪು ಪ್ರದರ್ಶನ (ಫ್ಯಾಶನ್ ಶೋ) ಗಮನ ಸೆಳೆಯಿತು.