ಹುಣಸೂರು ತಾಲೂಕು ಕಾಳೇಗೌಡನಕೊಪ್ಪಲು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಪಿ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ಚನ್ನೇಗೌಡ, ದೇವರಾಜೇಗೌಡ, ನಾರಾಯಣ್, ದೇವರಾಜ್, ಶಿವಕುಮಾರ್ ಇತರರಿದ್ದರು. 
ಜಿಲ್ಲೆ

ವಿವಿಧ ಕಾಮಗಾರಿಗೆ ಶಾಸಕ ಮಂಜುನಾಥ್ ಭೂಮಿಪೂಜೆ

ಹುಣಸೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆರ್‌ಡಿಪಿಆರ್ ಮತ್ತು ಮಲೆನಾಡು ಅಭಿವೃದ್ಧಿ ಯೋಜನೆಯಡಿ 1.27 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.

ಬಿಳಿಕೆರೆ ಹೋಬಳಿ ಕುಪ್ಪೆ ಗ್ರಾಮದಲ್ಲಿ ಆರ್‌ಡಿಪಿಆರ್ ಇಲಾಖೆಯ 50:54 ಯೋಜನೆಯಡಿ 27 ಲಕ್ಷ ರೂ., ಕೆಬ್ಬೆಕೊಪ್ಪಲು ಗ್ರಾಮದಲ್ಲಿ 18 ಲಕ್ಷ ರೂ., ಕೊಳಗಟ್ಟ ಗ್ರಾಮದಲ್ಲಿ 20 ಲಕ್ಷ ರೂ., ಮಲೆನಾಡು ಅಭಿವೃದ್ಧಿ ಯೋಜನಡಿ ಮಧುಗಿರಿಕೊಪ್ಪಲು ಗ್ರಾಮದಲ್ಲಿ 38 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಭೂಮಿಪೂಜೆ ನೆರವೇರಿಸಿದರು.

ಕಾಳೇಗೌಡನಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ನೆಪದಲ್ಲಿ ರಾಜ್ಯ ಸರ್ಕಾರ ಎರಡೂವರೆ ವರ್ಷಗಳ ಕಾಲ ತಾಲೂಕಿಗೆ ನಯಾಪೈಸೆ ಅನುದಾನ ನೀಡದೆ ಇದೀಗ ಹಿಂದಿನ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸುತ್ತಿದೆ. ಪ್ರತಿಹಳ್ಳಿಗಳಿಗೂ ಮುಖ್ಯರಸ್ತೆಯ ಸಂಪರ್ಕ ಕಲ್ಪಿಸುವ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸರ್ಕಾರ ಸವಲತ್ತುಗಳನ್ನು ಒದಗಿಸಲು ಶ್ರಮಿಸಿದ್ದೇನೆ. ಆರೋಗ್ಯ, ಶಿಕ್ಷಣ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ತಾಲೂಕು ಮಹತ್ತರ ಬದಲಾವಣೆಗಳನ್ನು ಕಾಣುತ್ತಿದೆ ಎಂದರು.

ಮರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣ್, ಕಲ್ಕುಣಿಕೆ ರಮೇಶ್, ದೇವರಾಜ್, ಮುಖಂಡರಾದ ದೇವರಾಜೇಗೌಡ, ಚೆನ್ನೇಗೌಡ, ಸುರೇಶ್, ಮಾದೇಗೌಡ, ಶಿವಕುಮಾರ್, ಶಂಕರಾಚಾರ್ ವಿಜಯಕುಮಾರ್, ಲೋಕೇಶ್, ರೇವಣ್ಣ ಆಚಾರಿ, ಕೃಷ್ಣೇಗೌಡ, ಶಿವೇಗೌಡ, ಗೀತಾ, ಶಿವರಾಜು, ಚೆನ್ನಯ್ಯ, ಬಸರಿಕಟ್ಟೆ ಶಂಕರ್, ಹಗರನಹಳ್ಳಿ ಕುಮಾರ್, ಕೊಳಗಟ್ಟ ರವಿ ಇತರರಿದ್ದರು.