ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9.77 ಕೋಟಿ ರೂ. ವೆಚ್ಚದ ರಸ್ತೆ, ಯುಜಿಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಗುರುವಾರ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯ 5054 ಲೆಕ್ಕ ಶೀರ್ಷಿಕೆ ಹಾಗೂ ಎಸ್‌ಸಿಪಿ ಅನುದಾನದಲ್ಲಿ ಡಿ.ದೇವರಾಜ ಅರಸು ರಸ್ತೆಯ ನಾರಾಯಣಶಾಸ್ತ್ರಿ ಜಂಕ್ಷನ್ ಬಳಿ, ರಮಾವಿಲಾಸ ರಸ್ತೆಯಿಂದ ದೇವರಾಜ ಅರಸು ರಸ್ತೆ ಹಾಗೂ ದೇವರಾಜ ಅರಸು ರಸ್ತೆಯ ಎರಡೂ ಬದಿಯಲ್ಲಿ ಚರಂಡಿ, ಫುಟ್‌ಪಾತ್ ನಿರ್ಮಾಣ ಕಾಮಗಾರಿಯಗೆ ಭೂಮಿಪೂಜೆ ನೆರವೇರಿಸಿದರು.
ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಎಇ ಸಿದ್ದರಾಜು, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್ ರಾಜು, ಪ್ರಧಾನ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷರಾದ ಹರ್ಷ, ಪರಮೇಶ್ ಗೌಡ, ವಿಘ್ನೇಶ್ವರ ಭಟ್, ಮೈಪು ರಾಜೇಶ್, ಬಿಎಲ್‌ಎ-1 ದಿನೇಶ್ ಗೌಡ, ವಾರ್ಡ್ ಅಧ್ಯಕ್ಷ ಸುರೇಂದ್ರ, ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ರಾಜೇಂದ್ರ, ಮುರುಗೇಶ್, ಗೋಪಾಲಕೃಷ್ಣ, ಸುದರ್ಶನ್, ಸಚಿನ್, ಡಿ. ದೇವರಾಜ ಅರಸು ರಸ್ತೆ ಮಾಲೀಕರ ಟ್ರೆಡರ್ಸ್ ಅಸೋಸಿಯೇಷನ್ ಅಧ್ಯಕ್ಷ ವೀರಭದ್ರಪ್ಪ, ಉಪಾಧ್ಯಕ್ಷ ಖಾಜ, ನಿರ್ದೇಶಕರಾದ ಮಹೇಂದ್ರ, ಅಬ್ದುಲ್ ಖಾದೀರ್, ಖಜಾಂಚಿ ನರ್ತನ್ ಇತರರು ಇದ್ದರು.