ಜಿಲ್ಲೆ

ವಿವಿ ಸಾಗರ ಜಲಾಶಯದ ನಾಲಾ ಆಧುನೀಕರಣಕ್ಕೆ 740 ಕೋಟಿ ರೂ.

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಹಿರಿಯೂರು ವಿವಿ ಸಾಗರ ಜಲಾಶಯ ಮತ್ತು ನಾಲಾ ಆಧುನೀಕರಣಕ್ಕೆ ಸರ್ಕಾರ ಕ್ರಮ ವಹಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಭದ್ರಾಮೇಲ್ದಂಡೆ ಯೋಜನಾ ಕಚೇರಿಯಲ್ಲಿ ಬುಧವಾರ ವಿವಿ ಸಾಗರ ಜಲಾಶಯ ಮತ್ತು ನಾಲಾ ಆಧುನೀಕರಣ ಕುರಿತಂತೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ,ವಿಶ್ವೇಶ್ವರಯ್ಯಜಲನಿಗಮದ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಡೆಸಿದ ಸಭೆ ಬಳಿಕ ಸುದ್ದಿಗಾ ರರೊಂದಿಗೆ ಮಾತನಾಡಿದ ಅವರು,ಏಷಿಯನ್‌ಡೆವಲೆಪ್‌ಮೆಂಟ್‌ಬ್ಯಾಂಕ್(ಎಡಿಬಿ)ನೆರವಿ ನೊಂ ದಿಗೆ 740 ಕೋಟಿ ರೂ.ವೆಚ್ಚದಲ್ಲಿ ವಿವಿ ಜಲಾಶಯದ 129 ಕಿ.ಮಿ.ಉದ್ದದ ನಾಲೆಗಳ ಆಧುನೀಕರಣ,ಹನಿ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳನ್ನು ಕೈ ಗೊಳ್ಳಲಾಗುವುದು.
ಪ್ರಸ್ತುತ ಜಲಾಶಯದಿಂದ 29 ಸಾವಿರ ಎಕರೆ ಪ್ರದೇಶಕ್ಕೆ ಕಾಲುವೆ ನೀರಾವರಿ ಸೌಲಭ್ಯವಿದೆ. ಹನಿ ನೀರಾವರಿ ಹಾಗೂ ಅಂತರ್ಜಲ ವೃದ್ಧಿ ಕಾಮಗಾರಿಗಳಿಂದ ಈ ವಿಸ್ತೀರ್ಣ 45 ಸಾವಿರ ಎಕರೆಗೆ ಹೆಚ್ಚಲಿದ್ದು,ವರ್ಷದಲ್ಲಿ 2 ಬಾರಿ ಬೆಳೆಗಳಿಗೆ ನೀರೊದಗಿಸಲು ಸಾಧ್ಯವಾಗ ಲಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ಜಲಾಶಯದ ಅಭಿವೃದ್ಧಿಯನ್ನು ಪ್ರತ್ಯೇಕವಾಗಿ ಕೈಗೊಳ್ಳಲಾಗುತ್ತಿದೆ.
ಎಡಿಬಿ ನೆರವಿನಡಿ ಜಲಾಶಯದ ತಾಣದ ಮುಂದಿರುವ 9 ಎಕರೆ ಪ್ರದೇಶವನ್ನು ಕೆಆರ್‌ಎಸ್ ಮಾದರಿ ಹಾಗೂ ಹಿನ್ನೀರು ಪ್ರದೇಶದ ಲ್ಲಿ ಜಲಕ್ರೀಡೆ ಅಭಿವೃದ್ಧಿಯ ಕುರಿತು ಚರ್ಚಿಸಲಾಗಿದೆ. ಉದ್ಯಾನದಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು.
ಕೇಂದ್ರದ ಸಪೋರ್ಟ್ ಫಾರ್ ಇರಿಗೇಷನ್ ಮಾಡ್ರನೈಜೇಷನ್ ಪ್ರೋಗ್ರಾಮ್(ಎಸ್‌ಐಎಮ್‌ಪಿ)ಅಡಿ 115 ವರ್ಷಗಳ ಹಿಂದೆ ನಿರ್ಮಿ ಸಿದ್ದ ಜಲಾಶಯದ ನಾಲಾ ಆಧುನೀಕರಣಕ್ಕೆ ಗುರುತಿಸಲಾಗಿದೆ. ಕಾಲುವೆ ನೀರಾವರಿ ಬದಲಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಳ್ಳಲಾಗುವುದು.
ಜಲಾನಯನ ಅಚ್ಚುಕಟ್ಟು ಪ್ರದೇಶದಲ್ಲಿ 600ಕ್ಕೂ ಹೆಚ್ಚು ಅಂರ್ತಜಲ ಮರುಪೂರಣ ಬಾವಿಗಳು ಹಾಗೂ 7ಬ್ಯಾರೇಜ್‌ಗಳನ್ನು ಅಭಿ ವೃದ್ಧಿಗೊಳಿಸಲಾಗುವುದು. ಹಿರಿಯೂರಲ್ಲಿ ಹಾದು ಹೋಗಿರುವ 3.ಕಿ.ಮೀ. ಸಹಿತ ಹೆಚ್ಚಿನ ಜನವಸತಿ ಇರುವ ಗ್ರಾಮಾಂತರ ಪ್ರದೇಶಗ ಳಲ್ಲಿ ಮುಚ್ಚಿದ ನಾಲಾವ್ಯವಸ್ಥೆಯನ್ನಾಗಿ ಪರಿವರ್ತಿಸಲಾಗುವುದು. ಪ್ರವಾಹ ನಿಯಂತ್ರಣಕ್ಕೂ ಕ್ರಮ ವಹಿಸಲಾಗುತ್ತದೆ ಎಂದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಮಾತನಾಡಿ,ಜಲಾಶಯದಿಂದ ನೀರು ಸೋರುವಿಕೆ,ಕಾಲುವೆ ನೀರು ಪೋಲು ತಡೆ ಹಾಗೂ ಸ್ವಯಂ ಚಾಲಿತ ಗೇಟ್‌ಗಳೊಂದಿಗೆ ಕೇಂದ್ರಿಕೃತ ಸ್ವಯಂಚಾಲನಾ ನಿರ್ವಹಣೆ ವ್ಯವಸ್ಥೆ ನಿರ್ಮಿಸಲಾಗುವುದು. ನಾಲಾ ಆಧುನೀಕ ರಣದ ಬಳಿಕ,ಹನಿ ನೀರಾವರಿ ನೀರಾವರಿಯ ಸದ್ಬಳಕೆಗೆ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುವುದು. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಟೀಮ್‌ಲೀಡರ್ ಲಂಡನ್‌ನ ಡೇನಿಯಲ್‌ರೆನಾಲ್ಟ್ ಯೋಜನೆ ಕಾರ‌್ಯಸೂಚಿ ಸಿದ್ಧಪಡಿಸಿದ್ದು,ಇನ್ನಷ್ಟು ಅಗತ್ಯ ಅಂಶಗಳನ್ನು ಡಿಪಿಆರ್‌ನಲ್ಲಿ ಅಳವಡಿಸಲಾಗುವುದು ಎಂದು ನಾರಾಯಣ ಸ್ವಾಮಿ ಹೇಳಿದರು.
‘ಭದ್ರೆ’ರಾಷ್ಟ್ರೀಯ ಯೋಜನೆಯಿಂದ ಹೊರಕ್ಕೆ?
ಕೇಂದ್ರ ಸರ್ಕಾರ 2012ರ ನಂತರ ಯಾವುದೇ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಲ್ಲ. ಆದರೂ ಭದ್ರಾಕ್ಕೆ ಸಂಪುಟದಲ್ಲಿ ಅನುಮೋದನೆ ನೀಡಿ,ಬಜೆಟ್‌ನಲ್ಲಿ 5300 ಕೋಟಿ ರೂ.ಮೀಸಲಿಟ್ಟಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶೇ. 60:40 ಅನುಪಾತದಲ್ಲಿ ಪಿಎಂಕೆಎಸ್‌ವೈ-ಎಐಬಿಪಿ ಅಡಿ ಅನುದಾನ ಬಿಡುಗಡೆಗೆ ಕೋರಿ ಬರೆದಿರುವ ಪತ್ರ ಸದ್ಯದಲ್ಲೇ ಕೇಂದ್ರವನ್ನು ತಲು ಪಲಿದೆ ಎಂದರು.
ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು,ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ,ಎಡಿಬಿ ಟೀಮ್‌ಲೀಡರ್ ಡೇನಿಯಲ್‌ರೆನಾಲ್ಟ್,ಡೆಪ್ಯೂಟಿ ಟೀಮ್‌ಲೀಡರ್‌ಶಿವಕುಮಾರ್,ಭದ್ರಾ ಮೇಲ್ದಂಡೆ ಯೋಜನೆ ಸಿಇ ಕೆ.ಎಂ.ಶಿವಪ್ರಕಾಶ್,ನಿವೃತ್ತ ಸಿಇ ಚೆ ಲುವರಾಜ್,ರಾಜ್ಯಜಲ ನಿರ್ವಹಣಾ ಕೇಂದ್ರದ ಬಿ.ಎಸ್.ರಾವ್,ಎಂ.ಜಿ.ಶಿವಕುಮಾರ್ ಮತ್ತಿತರ ಅಧಿಕಾರಿಗಳಿದ್ದರು.
ಕೇಂದ್ರ ಜಲ ಆಯೋಗದ ಮುಖ್ಯಇಂಜಿನಿಯರ್ ಡೋರ‌್ಗೆ ಪಿ.ಗ್ಯಾಂಬಾ,ಎಡಿಬಿ ಅಧಿಕಾರಿ ರಾಜೇಶ್‌ಯಾದವ್ ಆನ್‌ಲೈನ್‌ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
(ಸಿಟಿಡಿ 16 ವಿವಿ ಸಾಗರ ಡೆವಲ್‌ಪ್‌ಮೆಂಟ್)
ಚಿತ್ರದುರ್ಗದಲ್ಲಿ ಮಂಗಳವಾರ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ,ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಹಿರಿಯೂ ರು ವಿವಿ ಸಾಗರ ಜಲಾಶಯ,ನಾಲಾ ಅಧುನೀಕರಣ ಕುರಿತಂತೆ ಸಭೆ ನಡೆಸಿದರು. ಡಿಸಿ ಜಿಆರ್‌ಜೆ ದಿವ್ಯಾಪ್ರಭು, ಸಿಇ ಕೆ.ಎಂ.ಶಿವಕುಮಾ ರ್,ನಿವೃತ್ತ ಸಿಇ ಚೆಲುವರಾಜ್,ಎಡಿಬಿ ಟೀಮ್‌ಲೀಡರ್ ಡೇನಿಯಲ್ ರೆನಾಲ್ಟ್,ಡೆಪ್ಯೂಟಿ ಟೀಮ್‌ಲೀಡರ್ ಶಿವ ಕುಮಾರ್ ಇತರರು ಇದ್ದರು.