ಜಿಲ್ಲೆ

ವಿವಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

Gadag

ಗದಗ: ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ದೇಶದ ಪ್ರಥಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯವನ್ನು ಸ್ವಯಂ ಸಮರ್ಥನೀಯ ಮಾದರಿ ವಿಶ್ವವಿದ್ಯಾಲಯವನ್ನಾಗಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುಕಾಂತ ಚಟಪಲ್ಲಿ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಶನಿವಾರ ಜಿಲ್ಲೆಯ ಪ್ರಥಮ ದರ್ಜೆಯ ಮಹಾವಿದ್ಯಾಲಯಗಳ ಎಲ್ಲ ಪ್ರಾಚಾರ್ಯರು ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದಲ್ಲಿ ಜರುಗಿದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯ ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಮಾಡಿದೆ. ಹತ್ತು ಹೊಸ ಪಿ.ಜಿ. ಕೋರ್ಸ್​ಗಳನ್ನು ಆರಂಭಿಸಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಆರ್​ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಇಲಾಖೆಗಳಲ್ಲಿ ಉದ್ಯೋಗ ಲಭಿಸುವ ರೀತಿಯಲ್ಲಿ ಕಾನೂನು ರಚನೆ ಮಾಡಬೇಕಾಗಿದೆ ಎಂದರು.

ಅಲ್ಲದೆ, ವಿಶ್ವವಿದ್ಯಾಲಯದಲ್ಲಿ ಪ್ರಾರಂಭ ಮಾಡಿರುವ ವಿವಿಧ ಕೋರ್ಸ್​ಗಳ ಕುರಿತು ವ್ಯಾಪಕ ಪ್ರಚಾರ ನೀಡಬೇಕೆಂದು ಕುಲಪತಿ ಅವರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ರಾದ ಸಿ. ಲಿಂಗಾರೆಡ್ಡಿ, ಎಸ್.ಎಫ್. ಶಿದ್ನೆಕೊಪ್ಪ, ಡಾ. ಎಂ.ಎಂ. ಆವಟಿ, ಎ.ಐ. ನಾಯಕ, ಡಾ. ಉಮೇಶ ಪುರದ, ಐ.ವಿ. ಬೆಳ್ಳಿಕಟ್ಟಿ, ಉಮೇಶ ಬಾರಕೇರ, ಡಾ.ಡಿ.ಎಂ. ಗೌಡರ, ಪೊ›. ಎಸ್.ಎಚ್. ಬಡೇಖಾನವರ, ಡಾ.ಕೆ.ಎಸ್. ಪರಡ್ಡಿ, ಡಾ. ಸಂತೋಷ ಬೆಳವಡಿ, ಉಪನ್ಯಾಸಕರಾದ ಜಗದೀಶ ನರಗುಂದ, ಕುಮಾರಸ್ವಾಮಿ ಹಿರೇಮಠ, ಎನ್.ವಿ. ಜೋಶಿ ಉಪಸ್ಥಿತರಿದ್ದರು. ಪ್ರಾಚಾರ್ಯ ಎಂ.ಎಂ. ನರಗುಂದ ವಂದಿಸಿದರು.