ವಿರಾಜಪೇಟೆ: ಮೀನುಪೇಟೆ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಭಾನುವಾರ ವಿರಾಜಪೇಟೆ ಗೌರಿ-ಗಣೇಶ ಒಕ್ಕೂಟದ ಸಭೆ ಅಧ್ಯಕ್ಷ ಬಿ.ಜೆ ಸಾಯಿನಾಥ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧಕ್ಷರಾಗಿ ಬಿ.ಜೆ ಸಾಯಿನಾಥ್ ನಾಯ್ಕ್, ಗೌರವಾಧ್ಯರಾಗಿ ಎಸ್.ಆರ್.ಜಗದೀಶ್, ಗೋಪಾಲಕೃಷ್ಣ ಕಾಮತ್, ಉಪಾಧ್ಯಕ್ಷರಾಗಿ ಎಂ.ಎಸ್.ಸನ್ನಿ ಕಾರ್ಯಪ್ಪ, ಕೇಶವ ಕುಮಾರ್, ರಾಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ರಜನಿಕಾಂತ್, ಸಹ ಕಾರ್ಯದರ್ಶಿಗಳಾಗಿ ಸುಮೇಶ್ ಬೊಯಿಕೇರಿ, ಮನೋಹರ, ಲವ ಕುಕ್ಲೂರು, ಖಜಾಂಜಿಯಾಗಿ ಟಿ.ಎಸ್.ಶ್ರೀಕಾಂತ್, ಕಾನೂನು ಸಲಹೆಗಾರರಾಗಿ ಟಿ.ಪಿ ಕೃಷ್ಣ, ಗೌರವ ಸಲಹೆಗಾರರಾಗಿ ಪಿ.ಎಸ್.ಮನೋಜ್ ಕುಮಾರ್, ಪ್ರದೀಪ್‌ರೈ, ಅನಿಲ್ ಮಂದಣ್ಣ, ಸ್ನೇಕ್ ಸತೀಶ್, ಭರತ, ಕೂತಂಡ ಸಚಿನ್ ಆಯ್ಕೆಯಾದರು. ಪ್ರಚಾರ ಸಮಿತಿ ಸದಸ್ಯರಾಗಿ ವಿವೇಕ್ ರೈ, ಯುವರಾಜ್ ಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು.