ಜಿಲ್ಲೆ

ವಿಮ್ಸ್ ಕೆಲ ಸುಧಾರಣೆ ಕಂಡಿದೆ

ಬಳ್ಳಾರಿ : ವಿಮ್ಸ್‌ನಲ್ಲಿ ಕಳೆದ ಕೆಲ ತಿಂಗಳು ಹಲವು ನ್ಯೂನತೆಗಳಿದ್ದವು. ಸದ್ಯ ಹಲವು ಸುಧಾರಣೆ ಕಂಡಿವೆ ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಹೇಳಿದರು.
ನಗರದ ವಿಮ್ಸ್ ಹಾಗೂ ಜಿಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲ ತಿಂಗಳ ಹಿಂದೆ ಭೇಟಿ ನೀಡಿದ ವೇಳೆ ಹಲವು ನ್ಯೂನತೆಗಳು ಇದ್ದವು. ಆಗ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದರಿಂದ ಕೆಲ ಸುಧಾರಿಸುವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 430 ತ್ರೀವ ಅಪೌಷ್ಠಿಕ ಮಕ್ಕಳು ಇದ್ದಾರೆ. ಮಕ್ಕಳ ಅಪೌಷ್ಠಿಕ ಪುನಃಶ್ಚೇತನ ಘಟಕದಲ್ಲಿ ಯಾವ ಅಪೌಷ್ಠಿಕ ಮಕ್ಕಳ ಸಹ ದಾಖಲಾಗಿಲ್ಲ. ಹೊರ ಜಿಲ್ಲೆಯ ಮಕ್ಕಳ ದಾಖಲಾಗಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಸಂಬಂಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಅಪೌಷ್ಠಿಕತೆ ನಿರ್ಮೂಲನೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಬಳಿಕ, ಮಕ್ಕಳ ಅಪೌಷ್ಠಿಕ ಪುನಃಶ್ಚೇತನ ಘಟಕ, ಮದರ ಕೇರ್ ಹಾಗೂ ಮಕ್ಕಳ ತುರ್ತು ನಿಗಾ ಘಟಕ, ಜಿಲ್ಲಾಸ್ಪತ್ರೆಯಲ್ಲಿ ನ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಹಾಗೂ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇೀಟಿ ನೀಡಿ ಪರಿಶೀಲಿಸಿದರು. ನವಜಾತ ಶಿಶು ಹಾಗೂ ತಾಯಂದಿರಿಗೆ ಯಾವುದೇ ನ್ಯೂನತೆಗಳ ಉಂಟಾಗದಂತೆ ನಿಗಾ ವಹಿಸಬೇಕು ಎಂದು ವಿಭಾಗದ ಮುಖ್ಯಸ್ಥರಿಗೆ ಹಾಗೂ ಸಿಬ್ಬಂದಿಗೆ ನಿರ್ದೇಶಿಸಿದರು.
ಈ ವೇಳೆ ಕಾನೂನು ಪರಿವೀಕ್ಷಣಾಕಾರಿಗಳಾದ ಈಶ್ವರ ರಾವ್, ಚೆನ್ನಬಸಪ್ಪ, ಮಕ್ಕಳ ಸಹಾಯವಾಣಿ ಸಂಯೋಜನಾಕಾರಿ ಮಂಜುನಾಥ ಇದ್ದರು.