ಜಿಲ್ಲೆ

ವಿಮೋಚನಾ ದಿನ ಭಾಷಣ ಸ್ಪರ್ಧೆ 23ರಂದು

ಕಲಬುರಗಿ: ಕಲ್ಯಾಣ ಕರ್ನಾಟಕ ಸೇನೆಯಿಂದ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೆ.೨೩ರಂದು ಬೆಳಗ್ಗೆ ೧೧ರಿಂದ ೪ಗಂಟೆವರೆಗೆ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಸುಭಾಷ ಬನಪಟ್ಟೆ ಹೇಳಿದರು. ಸ್ಪರ್ಧೆಯ ತೀರ್ಪುಗಾರರಾಗಿ ಹಿಂದು ರಕ್ಷಕ ಶಿವಾಜಿ ಬ್ರಿಗೇಡ್ ಸಂಸ್ಥಾಪಕ ಗುರುಶಾಂತ ಟೆಂಗಳಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷö್ಮಣ ದಸ್ತಿ, ಸಾಹಿತಿ ವೀರಭದ್ರಪ್ಪ ಸಿಂಪಿ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಸ್ತುತ ಒಂದೇ ಕಾಲೇಜು ಆಯ್ಕೆ ಮಾಡಿಕೊಂಡು ಸ್ಪರ್ಧೆ ನಡೆಸಲಾಗುತ್ತಿದೆ. ಅದೇ ಕಾಲೇಜಿನಲ್ಲಿ ಒಟ್ಟು ೫೦ ವಿದ್ಯಾರ್ಥಿನಿಯರು ನೋಂದಣಿ ಮಾಡಿಕೊಂಡಿದ್ದಾರೆ. ಮೂರು ನಿಮಿಷದ ಭಾಷಣ ಅವಧಿ ಇರಲಿದೆ. ವಿಜೇತರಿಗೆ ಪಾಠೋಪಕರಣದ ಜತೆಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಐವರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಹೇಳಿದರು. ಕಾಶಿ ವಿಶ್ವನಾಥ ಸ್ವಾಮೀಜಿ, ಶ್ರೀಮತಿ ಗೋರಂಪಳ್ಳಿ, ಶ್ರೀದೇವಿ ಮುತ್ತಂಗಿ, ಆಕಾಶ ನಂದಿ ಇತರರಿದ್ದರು.