ಬೆಳಗಾವಿ: ವಿಮೆ ಹಣಕ್ಕಾಗಿ ಟ್ರಾೃಕ್ಟರ್ ಟೇಲರ್ ಕಳ್ಳತನ ಆಗಿರುವುದಾಗಿ ನಕಲಿ ಪ್ರಕರಣ ದಾಖಲಿಸಿದ್ದ ವ್ಯಕ್ತಿಯೊಬ್ಬನನ್ನು ಗುರುವಾರ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋಕಾಕ ತಾಲೂಕಿನ ರಾಜಾಪುರ ಗ್ರಾಮದ ಸಂಭಾಜಿ ಶಿವಾಜಿ ಯರಗಟ್ಟಿ (24) ಬಂಧಿತ ವ್ಯಕ್ತಿ. ರಾಜಾಪುರ ಗ್ರಾಮದ ಜಮೀನಿನಲ್ಲಿ ನಿಲ್ಲಿಸಿದ್ದ ಟ್ರಾೃಕ್ಟರ್ ಟೇಲರ್ ಕಳ್ಳತನವಾಗಿದೆ ಎಂದು ಜುಲೈ 11ರಂದು ಟ್ರಾೃಕ್ಟರ್ ಮಾಲೀಕ ಶಿವಾಜಿ ಯರಗಟ್ಟಿ ಹಾಗೂ ಆರೋಪಿ ಸಂಭಾಜಿ ಶಿವಾಜಿ ಯರಗಟ್ಟಿ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಟ್ರಾೃಕ್ಟರ್ ಟೇಲರ್‌ಗಳನ್ನು ಬಂಧಿತನು ತನ್ನ ಜಮೀನಿನಲ್ಲಿಯೇ ಮುಚ್ಚಿಟ್ಟಿದ್ದನು. ಪೊಲೀಸರು ಟ್ರಾೃಕ್ಟರ್ ಸಮೇತ ಟೇಲರ್ ವಶಪಡಿಸಿಕೊಂಡಿದ್ದಾರೆ. ಲಕ್ಷಾಂತರ ರೂ. ವಿಮೆ ಹಣಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಬಂಧಿತ ವ್ಯಕ್ತಿ ಒಪ್ಪಿಕೊಂಡಿದ್ದಾನೆ ಎಂದು ಎಸ್‌ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.