ಬೆಳಗಾವಿ: ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಿಗೆ ಆಯ್ಕೆಗೊಂಡ ಅಪ್ಟೆಕ್ ಏವಿಯೇಷನ್ ಅಕಾಡೆಮಿಯ ಆರು ವಿದ್ಯಾರ್ಥಿಗಳನ್ನು ಮಂಗಳವಾರ ಸನ್ಮಾನಿಸಿ, ಗೌರವಿಸಲಾಯಿತು.
ಬೈಲಹೊಂಗಲದ ಲಕ್ಷ್ಮೀ ಓಂಕಾರ್, ಸತಾರಾ ಜಿಲ್ಲೆಯ ಅಂಜಲಿ ಧಾನೆ, ಸಾಂಗ್ಲಿ ಜಿಲ್ಲೆಯ ಶಿಫಾ ಮುಲ್ಲಾ ಅವರು ಏರ್ ಇಂಡಿಯಾದ ಆನ್‌ಬೋರ್ಡ್ ಕ್ಯಾಟರಿಂಗ್ ಸೇವೆಗಳಿಗೆ ಆಯ್ಕೆಯಾಗಿದ್ದು, ಬೆಳಗಾವಿಯ ಉರ್ದು ಮಾಧ್ಯಮದ ವಿದ್ಯಾರ್ಥಿನಿ ನಫಿಯಾ ವಿಸ್ತಾರಾ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಾಂಜ್ ಸೇವೆಗೆ ಕಣಗಲಾ ಗ್ರಾಮದ ಸಾನಿಕಾ ಮೋರೆ ಮತ್ತು ದಾಂಡೇಲಿಯ ಮಿತಾಲಿ ಗಾಂವ್ಕರ್ ಆಯ್ಕೆಯಾಗಿದ್ದಾರೆ. ಅಪ್ಟೆಕ್ ಏವಿಯೇಷನ್ ಅಕಾಡೆಮಿ ಪ್ರಾದೇಶಿಕ ಮುಖ್ಯಸ್ಥ ಅಖಿಲ ಕೃಷ್ಣನ್, ವಿನೋದ ಬಾಮನೆ, ಶ್ರೀಸರಸ್ವತಿ ಇನ್ಫೋಟೆಕ್‌ನ ಜ್ಯೋತಿ ಬಾಮನೆ, ವಿಮಾನಯಾನ ತರಬೇತುದಾರ ಕೋಮಲ್ ಜಾನಿ, ಶಾಖಾ ವ್ಯವಸ್ಥಾಪಕ ಪ್ರಕಾಶ ಪಾಟೀಲ ಇತರರಿದ್ದರು.