ಹುಬ್ಬಳ್ಳಿ: ಅನಾಥ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಸಪ್ನೋಂ ಕೀ ಉಡಾನ್ ಕಾರ್ಯಕ್ರಮಕ್ಕೆ ಶನಿವಾರ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಯಿತು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಸಪ್ನೋಂ ಕೀ ಉಡಾನ್ ಕಾರ್ಯಕ್ರಮದಡಿ ನಗರದ ಸೇವಾ ಭಾರತಿ ಟ್ರಸ್ಟ್ ನ ಅನಾಥ ಹಾಗೂ ನಿರ್ಗತಿಕ 15ಮಕ್ಕಳು ಹಾಗೂ ಇಬ್ಬರು ಮಾತೆಯರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು.
ಹುಬ್ಬಯ ರೌಂಡ್ ಟೇಬಲ್-37ರ ಆಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದ ಪ್ರಾಯೋಕತ್ವವವನ್ನು ಪಾಲಿಕೆ ಮಾಜಿ ಮೇಯರ್ ವೀರಣ್ಣ ಸವಡಿ ಹಾಗೂ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ವಹಿಸಿದ್ದರು. ರೌಂಡ್ ಟೇಬಲ್-37ರ ಅಧ್ಯಕ್ಷೆ ಡಾ. ಅಪೂರ್ವಾ ಪಾಟೀಲ ಹಾಗೂ ಡಾ. ವಿವೇಕ ಪಾಟೀಲ ನೇತೃತ್ವವಹಿಸಿದ್ದರು.
ಅನಾಥ ಮಕ್ಕಳು ಬೆಂಗಳೂರಿನ ನೆಹರು ಪ್ಲಾನೆಟ್ನಲ್ಲಿ ಬಾನುವಾರ ಆಯೋಜಿಸಿದ್ದ ವಿಜ್ಞಾನ ವಿಷಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸೇವಾ ಭಾರತಿಯಲ್ಲಿ ಆಶ್ರಯ ಪಡೆದು ಸುಂದರ ಬದುಕಿನ ಕನಸು ಕಾಣುತ್ತಿರುವ ಅನಾಥ ಮಕ್ಕಳಲ್ಲಿ ಈ ಬಾನಂಗಳ ಹಾರಾಟ ಹೊಸ ಚೈತನ್ಯ, ಹುಮ್ಮಸ್ಸು ಮೂಡಿಸಿದಂತಾಯಿತು ಎಂದರೆ ತಪ್ಪಾಗಲಾರದು.
ಕೇಂದ್ರ ಸರ್ಕಾರ ಅನಾಥ ಹಾಗೂ ನಿರ್ಗತಿಕ ಮಕ್ಕಳಿಗಾಗಿ ಆಯೋಜಿಸಿರುವ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ತಾವು ಸಹ ಒಂದು ಭಾಗವಾಗುವ ಅವಕಾಶ ಕಲ್ಪಿಸಿಕೊಟ್ಟ ರೌಂಡ್ ಟೇಬಲ್ಗೆ ಅಭಿನಂದನೆ ಸಲ್ಲಿಸುತ್ತೇವೆ. ಬಾನೆತ್ತರದಲ್ಲಿ ಹಾರಾಡುವ ವಿಮಾನದಲ್ಲಿ ತಾವು ಯಾವಾಗ ಪ್ರಯಾಣಿಸುವುದು ಎಂದು ಮಕ್ಕಳು ಸಹಜವಾಗಿ ಕನಸು ಕಾಣುತ್ತಾರೆ. ಅವರ ಕನಸನ್ನು ನನಸಾಗಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಮಾಜಿ ಮೇಯರ್ ವೀರಣ್ಣ ಸವಡಿ ಹೇಳಿದರು.
ಬೆಂಗಳೂರಿನ ನೆಹರು ಪ್ಲಾನೆಟ್, ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್ ಸೇರಿ ಮತ್ತಿತರ ಪ್ರದೇಶಗಳಿಗೆ ಕೊಂಡೊಯ್ದು ವಿವಿಧ ರೀತಿಯ ತಿಳಿವಳಿಕೆ ನೀಡುವ ಈ ಕಾರ್ಯಕ್ರಮ ನಿಜಕ್ಕೂ ಅನಾಥ ಮಕ್ಕಳ ಬದುಕಿನಲ್ಲಿ ಆಶಾ ಭಾವನೆ ಮತ್ತಷ್ಟು ಹೆಚ್ಚಿಸಲಿದೆ ಎಂಬುದು ನಿಸ್ಸಂಶಯ ಎಂದರು.
ಪ್ಪಣ್ಣ ಮಜ್ಜಗಿ, ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಎಂಡಿ ವಿರೇಶ ಉಂಡಿ, ಸ್ವರ್ಣಾ ಗ್ರುಪ್ನ ಮಾಲೀಕ ಡಾ. ವಿ.ಎಸ್. ವಿ. ಪ್ರಸಾದ, ಇತರರು ಇದ್ದರು.