ಜಿಲ್ಲೆ

ವಿಮಾನ ನಿಲ್ದಾಣದಲ್ಲಿ 92.27 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಪತ್ತೆ

ಮಂಗಳೂರು: ಇಲ್ಲಿನ ಅಂ.ರಾ. ವಿಮಾನ ನಿಲ್ದಾಣದಲ್ಲಿ 92.27 ಲಕ್ಷ ರೂಪಾಯಿ ಮೌಲ್ಯದ 1.999 ಕಿ.ಗ್ರಾಂ ಚಿನ್ನ ಅಕ್ರಮ ಸಾಗಾಟ ಮಾಡುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ಪತ್ತೆ ಮಾಡಿದ್ದಾರೆ.

ಉಳ್ಳಾಲದ ಮೊಹಮ್ಮದ್ ಆಸಿಫ್ ದುಬೈಯಿಂದ ಆಗಮಿಸಿದ್ದು, ಆತನನ್ನು ತಪಾಸಣೆ ಮಾಡಿದಾಗ ಚಿನ್ನದ ಪೌಡರ್ ಅಂಟು ಬೆರೆಸಿ ಒಳ ವಸ್ತ್ರದಲ್ಲಿ ಅಳವಡಿಸಿ ಚಿನ್ನ ಅಕ್ರಮ ಸಾಗಾಟ ಮಾಡಿದ್ದ.