ಮಂಗಳೂರು: ಗ್ಯಾಸ್ ಲೈಟರ್, ಇಯರ್ ಫೋನ್ ಮೊದಲಾದ ವಸ್ತುಗಳ ಒಳಗಿಟ್ಟು ಚಿನ್ನ ಅಕ್ರಮ ಸಾಗಾಟ ಮಾಡುತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕಾಸರಗೋಡು ಕೂಡ್ಲು ನಿವಾಸಿ ಅಬ್ದುಲ್ ರಹೀಂ ಇರಿಯಾಲ್ 9.6 ಲಕ್ಷ ರೂ. ಮೌಲ್ಯದ 196 ಗ್ರಾಂ ಚಿನ್ನ ಗ್ಯಾಸ್ ಲೈಟರ್, ಇಯರ್ ಫೋನ್, ಎಂಪಿ ತ್ರೀ ಪ್ಲೇಯರ್ ಒಳಗಿಟ್ಟು ಸಾಗಾಟ ಮಾಡುತ್ತಿದ್ದ. ಈತನನ್ನು ಚಿನ್ನ ಸಮೇತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.