ಕಲಬುರಗಿ: ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಬೇಕು, ಉಡಾನ್ ಯೋಜನೆ ಅಡಿ ಹೆಚ್ಚಿನ ವಿಮಾನಗಳ ಹಾರಾಟ ನಡೆಸಲು ಆಗ್ರಹಿಸಿ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಅವರಿಗೆ ಸಂಸದ ರಾಧಾಕೃಷ್ಣ ದೊಡ್ಡಮನಿ ಮನವಿ ಸಲ್ಲಿಸಿದರು. ವಿಮಾನ ಸೇವೆಯಲ್ಲಿ ದಿಢೀರ್ ರದ್ದು ಮಾಡಿದ್ದರಿಂದ ಪ್ರಯಾಣಿಕರು, ಉದ್ಯಮಿಗಳು, ವ್ಯಾಪಾರಸ್ಥರಿಗೆ ತೊಂದರೆ ಆಗಿದೆ. ಕಲಬುರಗಿ, ನವದೆಹಲಿ ವಿಮಾನ ರದ್ದು ಆಗಿ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಪ್ರಸ್ತುತ ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುತ್ತಿದೆ. ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಿಗೆ ವಿಮಾನ ಸೇವೆ ಆರಂಭಿಸಬೇಕು ಎಂದು ಮನವಿ ಮಾಡಿದರು. ಉತ್ತಮ ರನ್ ವೇ, ರಾತ್ರಿ ಲ್ಯಾಂಡಿAಗ್ ವ್ಯವಸ್ಥೆ ಸೇರಿ ಎಲ್ಲ ಸಾಮರ್ಥ್ಯವನ್ನು ಕಲಬುರಗಿ ನಿಲ್ದಾಣ ಹೊಂದಿದೆ. ಇನ್ನಷ್ಟು ಸೌಲಭ್ಯ ಒದಗಿಸಿ, ಅಭಿವೃದ್ಧಿಗೆ ಸಾಥ್ ನೀಡಬೇಕು. ಅಭಿವೃದ್ಧಿಗೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದ್ದಾರೆ.