ಜಿಲ್ಲೆ

ವಿಭೂತಿ ಧಾರಣೆಯಿಂದ ಸರ್ವ ಕಷ್ಟ ದೂರ

ಚಿತ್ತಾಪುರ: ವಿಭೂತಿ ಧರಿಸಿದರೆ ಮನುಷ್ಯನಲ್ಲಿನ ಪಾಪ-ಕರ್ಮಗಳು ದೂರವಾಗಿ ಪುಣ್ಯ ಪ್ರಾಪ್ತಿಯಾಗಲಿದೆ ಎಂದು ಬೆಳಗುಂಪಾ ಮಠದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು ನುಡಿದರು.

ಸಾವಳಗಿ ಶ್ರೀ ಶಿವಲಿಂಗೇಶ್ವರ ಮಠದ ಆವರಣದಲ್ಲಿರುವ ನಾಗಾವಿ ಗೋಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಗೋಮಯದಿಂದ ತಯಾರಿಸಿದ ಶುದ್ಧ ವಿಭೂತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ವಿಭೂತಿ ಅಂದರೆ ವಿಶಿಷ್ಟವಾದದ್ದು ಎಂದರ್ಥ. ಹಿಂದು ಸಂಪ್ರದಾಯದಲ್ಲಿ ವಿಭೂತಿಗೆ ವಿಶೇಷ ಸ್ಥಾನವಿದೆ. ಹಣೆ ಮತ್ತು ದೇಹದ ವಿವಿಧೆಡೆ ವಿಭೂತಿ ಹಚ್ಚಿಕೊಳ್ಳುವುದರಿಂದ ಶರೀರ ಶುದ್ಧಿಯಾಗಿ ಸರ್ವ ಕಷ್ಟಗಳು ದೂರವಾಗುತ್ತವೆ ಎಂದರು.

ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಹಲಕರ್ಟಿ ಕಟ್ಟಿಮನಿ ಹಿರೇಮಠದ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರು ಸಾನ್ನಿಧ್ಯ ಹಾಗೂ ಗೋಶಾಲೆ ಅಧ್ಯಕ್ಷ ರಮೇಶ ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ರವಿ ನಾಯಕ್, ಅಂಬರೀಶ ಸುಲೇಗಾಂವ್, ರಾಜೇಶ ದೇಶಪಾಂಡೆ, ನರಸಿಂಹ ಕುಲಕರ್ಣಿ, ಹರ್ಷಿತ್ ಕುಲಕರ್ಣಿ, ವೆಂಕಟಮ್ಮ ಪಾಲಪ್, ಮಲ್ಲಿಕಾರ್ಜುನರೆಡ್ಡಿ ಇಜಾರ್, ನಾಗರಾಜ ಹೂಗಾರ, ಸಿದ್ದರಾಮಯ್ಯ ಗೊಂಬಿಮಠ, ವೀರಣ್ಣ ಶಿಲ್ಪಿ, ಶಿವಲೀಲಾ ಮಠಪತಿ, ಅಕ್ಕಮ್ಮ ದೇಸಾಯಿ ಇತರರಿದ್ದರು.
ಸಂತೋಷ ಹಾವೇರಿ ಸ್ವಾಗತಿಸಿದರು. ನಟರಾಜ ಶಿಲ್ಪಿ ನಿರೂಪಣೆ ಮಾಡಿದರು. ರಾಜಶೇಖರ ಕಡ್ಲಿ ವಂದಿಸಿದರು. ಪಶುವೈದ್ಯ ಪರಿವೀಕ್ಷಕ ಶಫಿಯುದ್ದೀನ್ ಅವರನ್ನು ಸತ್ಕರಿಸಲಾಯಿತು.