ಜಿಲ್ಲೆ

ವಿಭಾಗೀಯ ಡಾಕ್ ಅದಾಲತ್ 29ಕ್ಕೆ

ಚಿತ್ರದುರ್ಗ: ಫಿಲ್ಟರ್ ಹೌಸ್ ಸಮೀಪದ ಚಿತ್ರದುರ್ಗ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸೆ. 29ರಂದು ಸಂಜೆ 4ಕ್ಕೆ ವಿಭಾಗೀಯ ಡಾಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು, ಗ್ರಾಹಕರು ಅಂಚೆ ಸೇವೆಗಳ ಸಂಬಂಧ ದೂರು, ಸಲಹೆಗಳಿದ್ದಲ್ಲಿ 27ರ ಮಧ್ಯಾಹ್ನ 3ರೊಳಗೆ ಕಚೇರಿಗೆ ಕಳುಹಿಸಬೇಕು ಎಂದು ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ಓ.ವಿರೂಪಾಕ್ಷಪ್ಪ ತಿಳಿಸಿದ್ದಾರೆ.