ರಾಯಬಾಗ, ಬೆಳಗಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಜತೆಗೆ ಸಹಕಾರ ನೀಡಲು ವಿಪತ್ತು ನಿರ್ವಹಣಾ ಸಮಿತಿ ರಚಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಉಪತಹಸೀಲ್ದಾರ್ ಪರಮಾನಂದ ಮಂಗಸೂಳಿ ಹೇಳಿದರು.
ಪಟ್ಟಣದ ಬಾಬು ಜಗಜೀವನರಾಮ ಸಭಾಭವನದಲ್ಲಿ ಧರ್ಮಸ್ಥಳ ಗ್ರಾ.ಯೋ.ಬಿ.ಸಿ.ಟ್ರಸ್ಟ್, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಸಮಿತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಜನೆಯ ಚಿಕ್ಕೋಡಿ ಜಿಲ್ಲಾ ನಿರ್ದೇಶಕ ಕೃಷ್ಣಪ್ಪ ಟಿ. ಮಾತನಾಡಿ, ತಂಡದಲ್ಲಿ ಈಗ 150 ಯುವಕರಿದ್ದಾರೆ ಎಂದರು. ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪಾಲ್ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಡಾ.ಸುರೇಶ ಕದ್ದು, ಅಗ್ನಿಶಾಮಕ ದಳದ ಠಾಣಾಧಿಕಾರಿ ಎ.ಕೆ.ಹಮ್ಮನಿ, ಎಎಸ್‌ಐ ಎಸ್.ಕೆ.ಪತ್ತಾರ, ಜಯವಂತ ಪಟಗಾರ, ವಿದ್ಯಾ ಪೂಜಾರಿ, ತಾಲೂಕು ಯೋಜನಾಧಿಕಾರಿ ಸಂತೋಷಕುಮಾರ ರೈ, ಮೇಲ್ವಿಚಾರಕಿ ಅರ್ಚನಾ, ದುರಗೇಂದ್ರ ಎಂ. ಇತರರಿದ್ದರು.