ಶೃಂಗೇರಿ ಕೆವಿಆರ್ ವೃತ್ತದಲ್ಲಿ ಕಾಂಗ್ರೆಸ್‌ನಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ತ್ರಿಮೂರ್ತಿ, ರಾಜಕುಮಾರ್ ಹೆಗಡೆ ಇತರರಿದ್ದರು. 
ಜಿಲ್ಲೆ

ವಿಪಕ್ಷಗಳಿಗೆ ಜನರಿಂದ ಪಾಠ

ಶೃಂಗೇರಿ: ವಿಪಕ್ಷಗಳ ಸುಳ್ಳು ಪ್ರಚಾರದ ನಡುವೆ ಮತದಾರರು ವಿಧಾನಸಭಾ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲತಂದು ಕೊಟ್ಟಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಹೇಳಿದರು.

ಪಟ್ಟಣದ ಕೆವಿಆರ್ ವೃತ್ತದಲ್ಲಿ ಶನಿವಾರ ಕಾಂಗ್ರೆಸ್ ನಡೆಸಿದ ವಿಜಯೋತ್ಸವದಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರಿಗೆ ಅನುಕೂಲವಾಗಿದ್ದು, ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಶಿವಮೂರ್ತಿ ಮಾತನಾಡಿ, ವಿಪಕ್ಷಗಳಿಗೆ ಮತದಾರರು ಸ್ಪಷ್ಟ ಸಂದೇಶ ನೀಡಿದ್ದಾರೆ. ಇನ್ನಾದರೂ ವಿಪಕ್ಷದವರು ಜನತೆ ನೀಡಿದ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದರು.

ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಲಾಯಿತು. ಪಕ್ಷದ ಮುಖಂಡರಾದ ರಾಜಕುಮಾರ್ ಹೆಗ್ಡೆ, ನಾರಾಯಣ, ತ್ರಿಮೂರ್ತಿ ಇತರರಿದ್ದರು.