ಬಾಗಲಕೋಟೆ ಪ್ರೆಸ್ ಕ್ಲಬ್‌ನಲ್ಲಿ ರತ್ನಾ ಉದ್ಯಮದ ಸುಧಾಕರ ಸಾಲಿಯಾನ್ ಹಾಗೂ ರಂಜೀತಕುಮಾರ್ ಶೆಟ್ಟಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. 
ಜಿಲ್ಲೆ

ವಿನಯ ತಿಮ್ಮಾಪುರ ಸದ್ಯ ಪಾಲುದಾರನಲ್ಲ

ಬಾಗಲಕೋಟೆ: ಬೆಳಗಾವಿ ಜಿಲ್ಲೆ ಕುಡುಚಿ ಪಟ್ಟಣದಲ್ಲಿ ರತ್ನಾ ಬಾರ್ ಆ್ಯಂಡ್ ರೆಸ್ಟೊರೆಂಟ್‌ನಲ್ಲಿ ವಿನಯ ತಿಮ್ಮಾಪುರ ಅವರ ಷೇರು ಇಲ್ಲ. ಸುಖಾಸುಮ್ಮನೇ ಆರೋಪ ಮಾಡಿದ್ದಾರೆ ಎಂದು ರತ್ನಾ ಎಂಟರ್ ಪ್ರೆÊಸಿಸ್‌ನ ಸುಧಾಕರ ಸಾಲಿಯಾನ್ ಹಾಗೂ ಪಾಲುದಾರ ರಂಜೀತಕುಮಾರ ಶೆಟ್ಟಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರತ್ನಾ ಹೋಟೆಲ್ ಮತ್ತು ರೆಸ್ಟೊರೆಂಟ್ ಮಾತ್ರ ಇದ್ದು, ಬಾರ್ ಗೆ ಅರ್ಜಿ ಹಾಕುವಾಗ ವಿನಯ ತಿಮ್ಮಾಪುರ ಷೇರು ಪಡೆದಿರಲಿಲ್ಲ. ೨೦೨೪ರ ಆಗಸ್ಟ್ನಲ್ಲಿ ನಾವು ಬಾರ್ ಪರವಾನಿಗೆ ಪಡೆಯಲು ಅರ್ಜಿ ಹಾಕಿದ್ದೇವೆ. ಮೊದಲು ತೀರಸ್ಕಾರ ಮಾಡಿದ್ದರು. ಅಽಕಾರಿಗಳು ನೀಡಿದ ಸೂಚನೆ ಪಾಲನೆ ಬಳಿಕ ಮತ್ತೊಮ್ಮೆ ಅರ್ಜಿ ಹಾಕಿದ್ದೇವೆ. ಇನ್ನು ಸಹ ನಮಗೆ ಬಾರ್ ಪರವಾನಿಗೆ ಸಿಕ್ಕಿಲ್ಲ. ನ್ಯಾಯಾಲಯಕ್ಕೆ ಮೊರೆ ಹೋಗಲಾಗಿದೆ. ತಪ್ಪಾಗಿ ಅರ್ಥೈಸಿಕೊಂಡು ಪಿ.ರಾಜೀವ್ ಸಂದೇಶ ನೀಡಿದ್ದಾರೆ ಎಂದರು.

ರತ್ನಾ ಹೋಟೆಲ್ ಹಾಗೂ ರೆಸ್ಟೊರೆಂಟ್ ಇದ್ದಾಗ ಕಳೆದ ವರ್ಷ ಜನೆವರಿಯಲ್ಲಿ ವಿನಯ ತಿಮ್ಮಾಪುರ ಅವರು ಶೇ.೨೩ ಷೇರು ಪಡೆದಿದ್ದರು. ಆದರೆ, ಯಾವುದೇ ಬಂಡವಾಳ ಹೂಡಿಕೆ ಮಾಡಿರಲಿಲ್ಲ. ನಿರ್ವಹಣೆ ಲಾಭ, ನಷ್ಟದಲ್ಲಿ ಪಾಲುದಾರರ ಎಂದು ಆಗಿತ್ತು. ಆ ಬಳಿಕ ಅವರು ಷೇರು ಬೇರೆಯವರಿಗೆ ಹಸ್ತಾಂತರಿಸಿದ್ದಾರೆ. ಇದು ಬಾರ್‌ಗೆ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸುವ ಮುನ್ನ ಆಗಿರುವಂತದ್ದು. ಅವರು ಷೇರು ಹೊಂದಿಲ್ಲ ಎಂದರು.

ಇನ್ನು ಸುಧಾಕರ ಹಾಗೂ ನಮ್ಮ ನಡುವೆ ಮೊದಲಿನಿಂದಲೂ ಸಂಪರ್ಕ ಇತ್ತು. ನಾವಿಬ್ಬರೂ ಒಂದೇ ಊರಿನವರು. ಹೀಗಾಗಿ ನಾನು ಅಲ್ಲಿ ಪರಸ್ಪರ ಹೊಂದಾಣಿಕೆ ಮೇಲೆ ಷೇರು ಪಡೆದಿದ್ದೇವು. ಬಳಿಕ ವಿನಯ ಅವರು ಆರಂಭದಲ್ಲಿ ಷೇರು ಪಡೆದು, ಬಳಿಕ ಬೇಡ ಎಂದು ಬಿಟ್ಟಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಆಗಿರುವ ಪಾರ್ಟನರ್‌ಶಿಪ್ ಡೀಡ್‌ನಲ್ಲಿ ವಿನಯ ಅವರ ಹೆಸರು ಇಲ್ಲ ಎಂದು ಡೀಡ್ ಪ್ರತಿ ನೀಡಿದರು. ಈಗ ಸಚಿವ ಆರ್.ಬಿ.ತಿಮ್ಮಾಪುರ ಅವರ ಪುತ್ರ ವಿನಯ ತಿಮ್ಮಾಪುರ ಉದ್ಯಮಕ್ಕೆ ಸಂಬ0ಧವಿಲ್ಲ. ಷೇರು ಇಲ್ಲ ಎಂದು ಹೇಳಿದರು.