ಜಿಲ್ಲೆ

ವಿದ್ಯೆಯಿಂದ ವ್ಯಕ್ತಿ ವಿಶ್ವಮಾನವ

ಕಲಬುರಗಿ: ಕುವೆಂಪು ವಾಣಿಯಂತೆ ಮಗು ಜನಿಸುವಾಗ ವಿಶ್ವಮಾನ, ಬೆಳೆಯುತ್ತ ಜಾತಿ, ಮತ, ಪಂಥದ ದುರ್ವಿಚಾರಗಳಿಂದ ಅಲ್ಪಮತಿಯಾಗುತ್ತಾನೆ. ವಿದ್ಯೆಯಿಂದ ವಿಶ್ವಮಾನವರನ್ನಾಗಿ ಮಾಡಬೇಕು ಎಂದು ಪ್ರೊ.ಚನ್ನಾರಡ್ಡಿ ಪಾಟೀಲ್ ಹೇಳಿದರು.

ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟçಕವಿ ಕುವೆಂಪು ಜನ್ಮದಿನದ ನಿಮಿತ್ತ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರು, ಮಕ್ಕಳು, ಪಾಲಕರು ಕುವೆಂಪು ಅವರ ಸಾಹಿತ್ಯ ಅಧ್ಯಯನ ಮಾಡಬೇಕು. ಅವರ ಜೀವನವೇ ಸಂದೇಶವಾಗಿದ್ದು, ಅದನ್ನು ಅರಿಯಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನ ಹಾಳು ಮಾಡಿಕೊಂಡರೆ, ಇಡೀ ಜೀವನವೇ ಹಾಳು ಮಾಡಿಕೊಂಡAತೆ. ಶ್ರದ್ಧೆಯಿಂದ ಅಭ್ಯಾಸಮಾಡಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾಭ್ಯಾಸ ಜೀವನದ ದಿಕ್ಕನ್ನೆ ಬದಲಿಸುವ ಶಕ್ತಿ ಹೊಂದಿದೆ. ಕುವೆಂಪು ಇದೇ ವಯಸ್ಸಿನಲ್ಲಿಯೇ ವ್ಯಕ್ತಿತ್ವ ವಿಕಸನ ಮಾಡಿಕೊಂಡರು ಎಂದರು.

ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ಪ್ರಭುಗೌಡ, ಕರುಣೇಶ ಹಿರೇಮಠ, ಉಪನ್ಯಾಸಕರು ಇತರರಿದ್ದರು.