ಬೇಲೂರು : ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ವಿಜಯವಾಣಿ’ ದಿನ ಪತ್ರಿಕೆ ಹೊರ ತಂದಿರುವ ವಿದ್ಯಾರ್ಥಿ ಮಿತ್ರ ಹಾಗೂ ಉದ್ಯೋಗ ಮಿತ್ರ ಪತ್ರಿಕೆಯನ್ನು ತಾಲೂಕಿನ ಹಗರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಾಸಕ ಎಚ್.ಕೆ.ಸುರೇಶ್ ಮಂಗಳವಾರ ವಿತರಿಸಿದರು.
ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಪ್ರಪಂಚದಲ್ಲಿ ಏನನ್ನಾದರೂ ಕಳ್ಳತನ ಮಾಡಬಹುದು ಆದರೆ ತಾವು ಕಲಿತ ವಿದ್ಯೆಯನ್ನೂ ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಆದ್ದರಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯೆಯತ್ತ ಹೆಚ್ಚಿನ ಗಮನ ಹರಿಸಿ ಕಲಿಯಬೇಕು ಸಲಹೆ ನೀಡಿದರು.
ಅಂದಿನ ಪಠ್ಯವನ್ನು ಅಂದೇ ಕಲಿತರೆ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಹುದು. ಇದಕ್ಕೆ ಪೂರಕವಾಗಿ ವಿಜಯವಾಣಿ ದಿನ ಪತ್ರಿಕೆ ತರುತ್ತಿರುವ ವಿದ್ಯಾರ್ಥಿ ಮತ್ತು ಉದ್ಯೋಗ ಮಿತ್ರ ಪತ್ರಿಕೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತುಂಬಾನೆ ಸಹಕಾರಿಯಾಗಿದೆ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸೇರಿದಂತೆ ಉನ್ನತ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಪೈಕಿ ಈ ಪತ್ರಿಕೆಯನ್ನು ಓದಿದ ಸಾಕಷ್ಟು ಜನರು ಎಲ್ಲ ಪರೀಕ್ಷೆಗಳಲ್ಲೂ ಹೆಚ್ಚು ಅಂಕಗಳನ್ನು ಪಡೆದಿರುವುದಲ್ಲದೆ, ಉದ್ಯೋಗವನ್ನು ಸಹ ಪಡೆದಿರುವ ನಿದರ್ಶನಗಳಿವೆ ಎಂದರು.
ಜತೆಗೆ ಪಾಲಕರು, ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು, ಉದ್ಯೋಗ ಪಡೆಯಬೇಕು ಎಂಬ ಕನಸನ್ನು ಕಂಡಿರುತ್ತಾರೆ. ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಜಯವಾಣಿಯ ವಿದ್ಯಾರ್ಥಿ ಮಿತ್ರದಲ್ಲಿ ದಿನನಿತ್ಯ ಬರುವಂತಹ ಪ್ರಶ್ನೋತ್ತರಗಳನ್ನು ಅಭ್ಯಾಸ ಮಾಡಬೇಕು. ಆ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ವಿಜಯವಾಣಿಯ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಿಸಿ ಮಾತನಾಡಿದ ಸ್ಥಳೀಯ ಮುಖಂಡ ಹಗರೆ ಡಿಶಾಂತ್ ಕುಮಾರ್, ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಏನಾದರೂ ಸಹಕಾರ ನೀಡಬೇಕೆಂಬ ಉದ್ದೇಶದಿಂದ ವಿಜಯವಾಣಿ ಪತ್ರಿಕೆಯವರು ಹೊರ ತರುತ್ತಿರುವ ವಿದ್ಯಾರ್ಥಿ ಮಿತ್ರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮತ್ತು ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ, ಉದ್ಯೋಗ ಭಯಸುವವರಿಗೆ ಇದು ಸಹಕಾರಿಯಾಗಿದೆ ಎಂದರು.
ಅದೇ ರೀತಿ ವಿದ್ಯಾರ್ಥಿಗಳಾದ ನೀವು ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಎಲ್ಲ ಪ್ರಶ್ನೋತ್ತರಗಳನ್ನು ಅರ್ಥೈಸಿಕೊಂಡು ಬರೆದು ಕಲಿಯಬೇಕು. ಅಂತಿವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಜಿಲ್ಲೆ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಶಾಲೆಗೆ, ಗ್ರಾಮಕ್ಕೆ, ಕೀರ್ತಿ ತಂದು ನಿಮ್ಮ ವಿದ್ಯಾರ್ಥಿ ಜೀವನವನ್ಮು ಉಜ್ವಲಗೊಳುಸಿಕೊಳ್ಳಬೇಕು ಎಂದರು.
ಹಗರೆ ಗ್ರಾಪಂ ಅಧ್ಯಕ್ಷ ಸಂದೇಶ್, ಸಾವಾಸಿಹಳ್ಳಿ ಗ್ರಾಪಂ ಸದಸ್ಯ ಶೇಖರ್‌ಗೌಡ, ಮಾಜಿ ಗ್ರಾಪಂ ಸದಸದಸ್ಯ ಮಂಜುನಾಥ್ ನೆಟ್ಟೇಕೆರೆ, ಮುಖ್ಯ ಶಿಕ್ಷಕ ವೆಂಕಟೇಶ್, ಸೇರಿದಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿದ್ದರು.