ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಸಿ ಸಾಗರದಲ್ಲಿ ಹಮ್ಮಿಕೊಂಡಿರುವ ಧರಣಿಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿದರು. ದಿನೇಶ್ ಶಿರವಾಳ, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಗಣಪತಿ ಹೆನಗೆರೆ, ರಮೇಶ್ ಇತರರಿದ್ದರು. 
ಜಿಲ್ಲೆ

ವಿದ್ಯುತ್‌ಗಿಂತ ಜೀವವೈವಿಧ್ಯವೇ ಮುಖ್ಯ

ಸಾಗರ: ಪಶ್ಚಿಮಘಟ್ಟದ ಶ್ರೇಣಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಆಘಾತಕಾರಿ ಯೋಜನೆ. ಯೋಜನೆ ಬೇಡ ಎಂದು ಪ್ರತಿ ಮನೆಯಿಂದಲೂ ಪ್ರತಿಭಟನೆಯ ಧ್ವನಿ ಬರಬೇಕು. ಶರಾವತಿ ನದಿ ಮೇಲೆ ಯೋಜನೆಗಳ ಮೂಲಕ ಪ್ರಹಾರ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಒತ್ತಾಯಿಸಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಸಿ ಸಾಗರ ಎಸಿ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವ ಧರಣಿಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದರು. ಸುರಂಗ ಮಾರ್ಗ ಕೊರೆದು ಯೋಜನೆ ಅನುಷ್ಠಾನಕ್ಕೆ ತಂದರೆ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿಲ್ಲ. ವಿದ್ಯುತ್ ಮುಖ್ಯವೋ? ಜೀವವೈವಿಧ್ಯದ ಬದುಕು ಮುಖ್ಯವೋ ಅನ್ನುವುದನ್ನು ಸರ್ಕಾರ ಮೊದಲು ನಿರ್ಧಾರ ಕೈಗೊಳ್ಳಬೇಕು. ಸಸ್ಯಸಂಪತ್ತು, ಪ್ರಾಣಿ ಪಕ್ಷಿ ಸಂಕುಲ, ಮನುಷ್ಯರ ಬದುಕು ನಾಶಕ್ಕೆ ಕಾರಣವಾಗುವ ಯೋಜನೆ ನಮಗೆ ಬೇಡ ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡ ಪ್ರಸನ್ನ ಕೆರೆಕೈ ಮಾತನಾಡಿ, ಪಶ್ಚಿಮಘಟ್ಟ ಸುಸ್ಥಿರವಾಗಿದ್ದರೆ ಪ್ರಪಂಚವೇ ಆರೋಗ್ಯಕರವಾಗಿರುತ್ತದೆ ಎಂದು ವೈಜ್ಞಾನಿಕ ವರದಿಗಳು ಹೇಳುತ್ತವೆ. ಆದರೆ ಪಶ್ಚಿಮಘಟ್ಟದ ಪರಿಸರದ ಅಸ್ತಿತ್ವವನ್ನೇ ನಾಶಪಡಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಯಾವ ಕಾರಣಕ್ಕೂ ಅನುಷ್ಠಾನಕ್ಕೆ ತರಬಾರದು. ಸ್ಥಳೀಯ ಶಾಸಕರು ಶಾಸನ ಸಭೆಯಲ್ಲಿ ಯೋಜನೆ ಪರವಾಗಿ ಮಾತನಾಡಿದ್ದು ಬೇಸರ ತರಿಸಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕ ಚರ್ಚೆ ಆಗಬೇಕು. ರಾಜ್ಯ ಸರ್ಕಾರ ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆಯಬೇಕು. ಮಳೆಕಾಡುಗಳನ್ನು ನಾಶ ಮಾಡುವ ಈ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದರು. ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಮಲ್ಲಿಕಾರ್ಜುನ ಹಕ್ರೆ, ಗಣಪತಿ ಹೆನಗೆರೆ, ರಮೇಶ್, ಹಿತಕರ ಜೈನ್, ಭದ್ರೇಶ, ಡಾ. ರಾಮಚಂದ್ರಪ್ಪ, ಕಬಸೆ ಅಶೋಕಮೂರ್ತಿ, ಸ್ವಾಮಿ ಗೌಡ ಇತರರಿದ್ದರು.

ಪಶ್ಚಿಮಘಟ್ಟಕ್ಕೆ ಇಷ್ಟು ದೊಡ್ಡ ಯೋಜನೆಯನ್ನು ಹೊರುವ ಶಕ್ತಿ ಹೊಂದಿಲ್ಲ. ಈ ನಿಟ್ಟಿನಲ್ಲಿ ರೈತ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವ ಪ್ರತಿಭಟನೆ ಸಮಯೋಚಿತವಾಗಿದೆ. ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು. ಸ್ಥಳೀಯ ಶಾಸಕರು, ಸಂಸದರು ಯೋಜನೆ ವಿರೋಸಬೇಕು. ಯೋಜನೆ ವಿರೋಸುವಾಗ ಪಕ್ಷ ಮುಖ್ಯವಾಗಬಾರದು. ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ