ಜಿಲ್ಲೆ

ವಿದ್ಯುತ್ ಸ್ಪರ್ಶಿಸಿ ಹಸು ಸಾವು

ರಾಜಣ್ಣ

ಸೋಮವಾರಪೇಟೆ: ಸಮೀಪದ ಬಳಗುಂದ ಗ್ರಾಮದಲ್ಲಿ ಭಾನುವಾರ ಕಬ್ಬಿಣದ ವಿದ್ಯುತ್ ಕಂಬದಲ್ಲಿ ಹರಿಯುತ್ತಿದ್ದ ವಿದ್ಯುತ್ ಸ್ಪರ್ಶಿಸಿ ಹಸುವೊಂದು ಮೃತಪಟ್ಟಿದೆ.

ಬಳಗುಂದ ಗ್ರಾಮದ ಕೆ.ಆರ್.ಪೂವಯ್ಯ ಅವರಿಗೆ ಸೇರಿದ ಹಸುವನ್ನು ಬೆಳಗ್ಗೆ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದಾರೆ. ಅಲ್ಲೇ ಇದ್ದ ಹಳೆಯ ಕಬ್ಬಿಣದ ಕಂಬಕ್ಕೆ ಹಸು ಬೆನ್ನನ್ನು ಸವರಿದ ಸಂದರ್ಭ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದೆ.

ಹೊಸ ಕಂಬ ಅಳವಡಿಸಲು ಸೆಸ್ಕ್‌ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಒಂದು ವಾರದ ಒಳಗೆ ಹೊಸ ಕಂಬ ಅಳವಡಿಸಿ ತಂತಿಗಳನ್ನು ಸರಿಪಡಿಸದೆ ಇದ್ದಲ್ಲಿ. ಸೋಮವಾರಪೇಟೆ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಬಳಗುಂದ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಪಿ.ದಿವಾನ್, ಗ್ರಾಮಸ್ಥರಾದ ಬಿ.ಆರ್ ಚೇತನ್, ಬಿ.ಬಿ.ಪ್ರಕಾಶ್, ಬಿ.ಸಿ.ಚಂದ್ರಾಜು, ಪಿ.ಬಿ.ಆನಂದ, ಬಿ.ಪಿ.ಮೇಘನ್ ಅವರು ಎಚ್ಚರಿಸಿದ್ದಾರೆ.