ಜಿಲ್ಲೆ

ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ವಿರೋಧ

ವಿಜಯಪುರ : ತಾಲೂಕಿನ ಹಡಗಲಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಸ್ಥಾವರ ನಿರ್ಮಾಣ ಕೈ ಬಿಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಹಡಗಲಿ ಗ್ರಾಮದ ಸರ್ವೇ ನಂ. 42/2 ಕ್ಷೇತ್ರ 291 ಎಕರೆ 36 ಗುಂಟೆ ಜಮೀನು ಸರ್ಕಾರದ ಕಾಯ್ದಿರಿಸಿದ ಹುಲ್ಲುಗಾವಲು ಜಮೀನಿನಲ್ಲಿ ಜಾನುವಾರು ಮೇಯಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಈ ಜಾಗದಲ್ಲಿ ಕೆಇಬಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ಜಾನುವಾರುಗಳನ್ನು ಮೇಯಿಸಲು ಜನರಿಗೆ ತೊಂದರೆ ಆಗುತ್ತಿದೆ. ಹುಲ್ಲುಗಾವಲು ಜಮೀನನ್ನು ಜಾನುವಾರು ಮೇಯಿಸಲು ಅವಕಾಶ ಕಲ್ಪಿಸಬೇಕು. ವಿದ್ಯುತ್ ಸ್ಥಾವರ ನಿರ್ಮಾಣವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಾಜಿ ಶಾಸಕ ವಿಠಲ ಕಟಕಧೋಂಡ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಮಲ್ಲಪ್ಪ ಬಿದರಿ, ಅಭಿಷೇಕ ಚಕ್ರವರ್ತಿ, ಕಲ್ಲಪ್ಪ ಡೋಣೂರ, ಶಂಕ್ರಪ್ಪ ಬೆಳ್ಳುಬ್ಬಿ, ಬೀರಪ್ಪ ಲಾಯಪ್ಪಗೋಳ, ಶ್ರೀಶೈಲ ತೊರವಿ, ರಮೇಶ ಪೂಜಾರಿ, ಬಸಪ್ಪ ಬಳಗಾನೂರ, ಆನಂದ ಉಕ್ಕಲಿ ಇತರರಿದ್ದರು.