ಜಿಲ್ಲೆ

ವಿದ್ಯುತ್ ಸಬ್ ಸ್ಟೇಷನ್ ನಿರ್ಮಿಸುವಂತೆ ಒತ್ತಾಯಿಸಿ ಏಕಾಂಗಿ ಹೋರಾಟ

ಬೇಲೂರು: ಬಿಕ್ಕೋಡು ಗ್ರಾಮಕ್ಕೆ ಸರ್ಕಾರದಿಂದ ವಿದ್ಯುತ್ ಸಭ್ ಸ್ಟೇಷನ್ ಮಂಜೂರಾಗಿದ್ದರೂ ಕೆಲಸ ಮಾಡಿಸಲು ವಿಫಲರಾಗಿರುವ ಜನಪ್ರತಿನಿಧಿಗಳ ನಡೆ ಖಂಡಿಸಿ ಏಕಾಂಗಿ ಹೋರಾಟಗಾರ ತೀರ್ಥಪ್ಪ ತಾಲೂಕು ಕಚೇರಿ ಮುಂಭಾಗ ಕಾಲಿ ಕೊಡದೊಂದಿಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟಿಸಿ ಮಾತನಾಡಿದ ಏಕಾಂಗಿ ಹೊರಾಟಗಾರ ತೀರ್ಥಪ್ಪ, ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ಹಿಂದೆಯೇ ಸರ್ಕಾರ ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಿ ಸಾಕಷ್ಟು ವರ್ಷಗಳೇ ಕಳೆದಿದೆ. ಆದರೂ ಇದುವರೆಗೂ ಕೆಲಸ ಪ್ರಾರಂಭಿಸಿಲ್ಲ. ಇಲ್ಲಿ ಸಬ್ ಸ್ಟೇಷನ್ ಆದರೆ ಈ ಭಾಗದ 125 ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗುತ್ತದೆ. ಈಗ ವಿದ್ಯುತ್ ಸರಭರಾಜಿದ್ದರೂ ಸರಿಯಾದ ವ್ಯವಸ್ಥೆ ಇಲ್ಲದೆ ಜನರು ಪರಿತಪಿಸುವಂತಾಗಿದೆ.

ಹಿಂದೆ ಶಾಸಕರಾಗಿದ್ದ ದಿ.ವೈ.ಎನ್.ರುದ್ರೇಶಗೌಡರು ಹಾಗೂ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಸಬ್ ಸ್ಟೇಷನ್‌ಗೆ ಚಾಲನೆ ನೀಡಿದ್ದು ಬಿಟ್ಟರೆ, ಇದುವರೆಗೂ ಯಾರೂ ಕೂಡ ಇತ್ತ ತಲೆಹಾಕದೆ ಇರುವುದು ದುರಾದುಷ್ಟಕರ ಸಂಗತಿಯಾಗಿದೆ. ಸ್ಥಳೀಯರ ಅನುಕೂಲಕ್ಕಾಗಿ ಮಿನಿ ವಾಟರ್ ಟ್ಯಾಂಕ್, ರೈಸ್‌ಮಿಲ್ ಇದ್ದರೂ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜಿಲ್ಲ ಉಸ್ತುವಾರಿ ಸಚಿವರು, ಸಂದರು ಗಮನ ಹರಿಸಿ ಬಿಕ್ಕೋಡಿಗೆ ಆದಷ್ಟು ಬೇಗ ವಿದ್ಯುತ್ ಸಬ್ ಸ್ಟೇಷನ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.