ಕೆ.ಎಂ.ದೊಡ್ಡಿ : ಸಮೀಪದ ಕೆ.ಶೆಟ್ಟಹಳ್ಳಿಯಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಮಾರು 8 ಎಕ್ಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ.
ಗ್ರಾಮದ ಅಶೋಕ್, ಚೇತನ್, ರಮೇಶ್, ಸಿದ್ದರಾಜು, ಬೊಮ್ಮೇಗೌಡ, ಪುಟ್ಟಸ್ವಾಮಿ ಮತ್ತು ಪ್ರದೀಪ್ ಅವರಿಗೆ ಸೇರಿದ ಕಬ್ಬು ಕಟಾವಿಗೆ ಬಂದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಜಮೀನಿನಲ್ಲಿ 11 ಕೆವಿ ವಿದ್ಯುತ್ ತಂತಿ ಹಾದು ಹೋಗಿದ್ದು ತಂತಿಯ ಸ್ಪರ್ಶದಿಂದ ಬಂದ ಕಿಡಿಯಿಂದ ಈ ಅವಘಡ ಸಂಭವಿಸಿದ್ದು, ಕಬ್ಬಿನ ಗದ್ದೆಗೆ ಬೆಂಕಿ ಹತ್ತಿಕೊಂಡಾಗ ಕೂಲಿ ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡುತಿದ್ದರು. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಅಗ್ನಿ ಶಾಮಕದಳ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಸೆಸ್ಕ್ ಇಲಾಖೆ ನಿರ್ಲಕ್ಷೃ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.