ಅರಕಲಗೂಡು: ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಮಂಗಳವಾರ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡು ವಾಸದ ಮನೆ ಭಸ್ಮವಾಗಿ ಅಪಾರ ಹಾನಿ ಸಂಭವಿಸಿದೆ.
ಗ್ರಾಮದ ಆಶಿಪ್ ಎಂಬುವರ ಮನೆ ಬೆಂಕಿಗಾಹುತಿಯಾಗಿದೆ. ಆಶಿಪ್ ಅವರು ಹಾಸನದಲ್ಲಿ ಹೋಟೆಲ್ ನಡೆಸುತ್ತಿದ್ದರು. ಕರೊನದಿಂದಾಗಿ ಹೋಟೆಲ್ ಮುಚ್ಚಿ ಅಲ್ಲ್ಲಿದ್ದ ವಸ್ತುಗಳನ್ನು ಮನೆಯ ಅಟ್ಟದ ಮೇಲೆ ಇರಿಸಿದ್ದರು. ಮಂಗಳವಾರ ಮಧ್ಯಾಹ್ನ ಕುಟುಂಬವರೆಲ್ಲರೂ ಮನೆಯಲ್ಲಿ ಇದ್ದಾಗಲೇ ಅಟ್ಟದ ಮೇಲೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯತೊಡಗಿದೆ. ಇದರಿಂದ ಗಾಬರಿಗೊಂಡ ಆಸೀಫ್ ಮತ್ತು ಕುಟುಂಬದವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸತತವಾಗಿ 2 ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಮನೆಯ ಅಟ್ಟದಲ್ಲಿದ್ದ ಹಾಸಿಗೆ, ಮಂಚ, ಟಿವಿ, ಫ್ಯಾನ್, ಪ್ಲಾಸ್ಟಿಕ್ ವಸ್ತುಗಳು ಬೆಂಕಿಗಹ್ಮತಿಯಾಗಿವೆ. ಮನೆಯಲ್ಲಿದ್ದ ಲಕ್ಷ್ಷಾಂತರ ರೂ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿ ನಷ್ಟವುಂಟಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.