ಜಿಲ್ಲೆ

ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ಗೆ ಮನೆ ಭಸ್ಮ

ಗುಬ್ಬಿ: ತಾಲೂಕಿನ ಕಡಬ ಹೋಬಳಿ ಕಲ್ಲೂರು ಕ್ರಾಸ್​ನ ನಂಜೇಗೌಡ ಅವರ ಮನೆಯಲ್ಲಿ ಮಂಗಳವಾರ ತಡರಾತ್ರಿ ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ನಿಂದ ಹೊತ್ತಿದ ಬೆಂಕಿಗೆ ಮನೆ ಭಸ್ಮವಾಗಿದ್ದು, ದವಸ, ಧಾನ್ಯ ಹಾಗೂ ಕೊಬ್ಬರಿ ಸುಟ್ಟಿದೆ. ಮನೆಯಲ್ಲಿದ್ದ 2 ಸೀಮೆ, 2 ನಾಟಿ ಹಸು ಹಾಗೂ 2 ಮೇಕೆಗಳನ್ನು ಬಿಚ್ಚಿ ಹೊರಗೆ ಬಿಟ್ಟಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆಗಾಗಲೇ ಮನೆಗೆ ಬಹುತೇಕ ಹಾನಿಯಾಗಿದೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.