ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶದಿಂದ ೯ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಲದಲ್ಲಿದ್ದ ನೀರಿನ ಮೋಟರ್ ಆನ್ ಮಾಡಲು ಹೋದಾಗ ಸ್ಥಳದಲ್ಲೇ ಕುಸಿದು ಬಿದ್ದು ವಿವೇಕ್ (೧೪) ಸಾವಪ್ಪಿದ್ದಾನೆ. ಮಲ್ಲೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದ ವಿವೇಕ್ ಶನಿವಾರ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಶಾಲೆಗೆ ತೆರಳದೆ ಹೊಲಕ್ಕೆ ಹೋಗಿದ್ದ. ಈ ವೇಳೆ ವಿದ್ಯುತ್ ಶಾಕ್‌ನಿಂದ ವಿವೇಕ್ ಮೃತಪಟ್ಟಿದ್ದಾನೆ. ಈ ಸಂಬAಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.