ವಿಜಯವಾಣಿ ಸುದ್ದಿಜಾಲ ಧಾರವಾಡ
ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ. 17ರಿಂದ 20ರವರೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು 20 ಎಂವಿಎ ಪವರ್ ವಿದ್ಯುತ್ ಪರಿವರ್ತಕ ಅಳವಡಿಸುವ ಕಾಮಗಾರಿಕೈಗೊಂಡಿದೆ. ಹೀಗಾಗಿ ಫೆ. 17ರಿಂದ 20ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ತಬಕದಹೊನ್ನಳ್ಳಿ, ಬಿರವಳ್ಳಿ, ಬೆಂಡಲಗಟ್ಟಿ, ಆಸ್ತಕಟ್ಟಿ, ನೆಲ್ಲಿಹರವಿ, ಮಲಕನಕೊಪ್ಪ , ಹುಣಸಿಕಟ್ಟಿ, ಬಿದರಗಡ್ಡಿ, ಗಂಜಿಗಟ್ಟಿ, ಸೊಲಾರಕೊಪ್ಪ, ನಾಗನೂರ, ಶಿರಶೆಟ್ಟಿಕೊಪ್ಪ, ಬಿ. ಹುಲಿಕಟ್ಟಿ, ದ್ಯಾವನಕೊಂಡ, ಮುಕ್ಕಲ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.