ನಗರಸಭೆಯ ವಿದ್ಯುತ್ ನಿರ್ವಹಣೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಎಸ್.ಮಾರೆಪ್ಪ, ಪದಾಕಾರಿಗಳಾದ ಬಿ.ಎ.ಕೇಶವಮೂರ್ತಿ, ವಿಜಯಕುಮಾರ, ಸಾಗರ್, ವೇಣುಗೋಪಾಲ, ಜಾವೇದ್ ಅಲಿ, ಕ್ಯಾಡಿಗೆಪ್ಪ ಇದ್ದರು. 
ಜಿಲ್ಲೆ

ವಿದ್ಯುತ್ ವಿಭಾಗದ ಕಾರ್ಮಿಕರನ್ನು ಮುಂದುವರಿಸಿ

ರಾಯಚೂರು: ನಗರಸಭೆಯ ವಿದ್ಯುತ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರ ಕಾರ್ಮಿಕರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕಾರ್ಮಿಕರನ್ನು ಕೆಲಸಕ್ಕೆ ಹಾಜರಾಗದಂತೆ ತಿಳಿಸಿರುವ ಗುತ್ತಿಗೆ ಸಂಸ್ಥೆ ಮೆ.ಎಚ್.ಕೆ.ಎಲ್.ಎಲೆಕ್ಟ್ರಿಕಲ್ಸ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಕಳೆದ 20 ವರ್ಷಗಳಿಂದ 28 ಕಾರ್ಮಿಕರು ವಿದ್ಯುತ್ ದೀಪಗಳ ನಿರ್ವಹಣೆ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ಮೆ.ಎಚ್.ಕೆ.ಎಲ್.ಎಲೆಕ್ಟ್ರಿಕಲ್ಸ್ ಸಂಸ್ಥೆ ಗುತ್ತಿಗೆ ಪಡೆದ ನಂತರದಲ್ಲಿ ಕಾರ್ಮಿಕರನ್ನು ಕಡಿತಗೊಳಿಸುತ್ತಾ ಬರುತ್ತಿದೆ. ಈಗ ಕಾರ್ಮಿಕರನ್ನು ಕೆಲಸಕ್ಕೆ ಬರದಿರುವಂತೆ ತಿಳಿಸಲಾಗುತ್ತಿದೆ.
ನಗರದಲ್ಲಿ 20 ವರ್ಷಗಳ ಹಿಂದೆ ಇದ್ದ ವಿದ್ಯುತ್ ಕಂಬಗಳ ಸಂಖ್ಯೆ ಈಗ ಹತ್ತಾರು ಪಟ್ಟು ಹೆಚ್ಚಾಗಿದ್ದು, ಅವುಗಳ ನಿರ್ವಹಣೆಗೆ ಕನಿಷ್ಠ 60 ಕಾರ್ಮಿಕರ ಅವಶ್ಯಕತೆಯಿದೆ. ಕೂಡಲೇ ವಿದ್ಯುತ್ ಕಂಬಗಳ ಸಂಖ್ಯೆಗೆ ಅನುಗುಣವಾಗಿ ಕಾರ್ಮಿಕರ ಸಂಖ್ಯೆ ಹೆಚ್ಚಳ ಮಾಡಬೇಕು.
ಕಾರ್ಮಿಕರಿಗೆ ಏಪ್ರಿಲ್‌ನಿಂದ ಜೂನ್‌ವರೆಗೆ ಕನಿಷ್ಠ ವೇತನ ನಿಗದಿಗೊಳಿಸಿ ಮೇ ಮತ್ತು ಜೂನ್ ತಿಂಗಳ ವೇತನ ಪಾವತಿಸಬೇಕು. ಪಿಎ್, ಇಎಸ್‌ಐ ಸೌಲಭ್ಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಸ್.ಮಾರೆಪ್ಪ, ಪದಾಕಾರಿಗಳಾದ ಬಿ.ಎ.ಕೇಶವಮೂರ್ತಿ, ವಿಜಯಕುಮಾರ, ಸಾಗರ್, ವೇಣುಗೋಪಾಲ, ಜಾವೇದ್ ಅಲಿ, ಕ್ಯಾಡಿಗೆಪ್ಪ ಪಾಲ್ಗೊಂಡಿದ್ದರು.