ಜಿಲ್ಲೆ

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ನಾಳೆ

ಹಲಗೂರು: ಸಮೀಪದ ಗುಂಡಾಪುರ ಗೇಟ್ ಬಳಿ ಇರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಂಗಳವಾರ ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯುವುದರಿಂದ ಸೆ.5 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಹಲಗೂರು ಸೇರಿದಂತೆ ಗುಂಡಾಪುರ, ದಳವಾಯಿ ಕೋಡಿಹಳ್ಳಿ, ಚನ್ನಪಟ್ಟಣ ರಸ್ತೆ, ಮದ್ದೂರು ರಸ್ತೆಯಲ್ಲಿ ಬರುವ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮುತ್ತತ್ತಿ ರಸ್ತೆಯಲ್ಲಿ ಬರುವ ಗ್ರಾಮಗಳಿಗೆ ಎಂದಿನಂತೆ ವಿದ್ಯುತ್ ಸಂಪರ್ಕವಿರುತ್ತದೆ ಎಂದರು ಸೆಸ್ಕ್ ಕಿರಿಯ ಇಂಜಿನಿಯರ್ ಎಂ.ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.