ಜಿಲ್ಲೆ

ವಿದ್ಯುತ್ ದುರಸ್ತಿ ವೇಳೆ ಲೈನ್‌ಮನ್ ಸಾವು

ಹಾಸನ: ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಶನಿವಾರ ವಿದ್ಯುತ್ ಹೈ ಟೆನ್ಷನ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ನಿಂದ ಲೈನ್‌ಮನ್ ಮೃತಪಟ್ಟಿದ್ದಾರೆ.

ತಾಲೂಕಿನ ಅಮ್ಮ ಗೊಡನಹಳ್ಳಿ ಗ್ರಾಮದ ವರುಣ್(31) ಮೃತ ದುರ್ದೈವಿ.

ಒಂದು ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದ ವರುಣ್ ಶನಿವಾರ ಮಧ್ಯಾಹ್ನ ಮೊಸಳೆ ಹೊಸಳ್ಳಿ ಗ್ರಾಮದ ರೈಲು ನಿಲ್ದಾಣದ ಬಳಿ ವಿದ್ಯುತ್ ಕಂಬವನ್ನೇರಿ ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದರು. 11 ಕೆವಿ ಲೈನ್ ನಿಂದ ವಿದ್ಯುತ್ ಶಾಕ್ ತಗುಲಿದ ಕ್ಷಣದಲ್ಲಿಯೇ ಮೃತಪಟ್ಟಿದ್ದಾರೆ. ಈ ವೇಳೆ ಕೆಲ ನಿಮಿಷ ಕಂಬದಲ್ಲೇ ನೇತಾಡಿದ್ದ ವರುಣ್ ನಂತರ ಕೆಳಗೆ ಬಿದ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೊರೂರು ಪೊಲೀಸ್ ಠಾಣಾ ವ್ಯಾಪಿ ್ತಯಲಿ ್ಲ ಪ್ರಕರಣ ದಾಖಲಾಗಿದೆ.