ಹಾಸನ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ವಿದ್ಯುತ್ ದರ ಪರಿಷ್ಕರಣೆ ಜಾರಿ ಮಾಡುವ ಮೂಲಕ ಸಾಮಾನ್ಯ ಗ್ರಾಹಕರನ್ನು ವಂಚಿಸುದ್ದಿದು, ರಾಜ್ಯ ಸರ್ಕಾರ ಕುಡಲೇ ಮಧ್ಯ ಪ್ರವೇಶಿಸಿ, ಆಯೋಗಕ್ಕೆ ಪತ್ರ ಬರೆಯಬೇಕು ಎಂದು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಒತ್ತಾಯಿಸಿದರು.
ಆಯೋಗವು ಮೇ.12 ರಂದು ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು ಹಿಂದೆ ಜಾರಿಯಲ್ಲಿದ್ದ ನಾಲ್ಕು ಹಂತದ ದರಪಟ್ಟಿಯನ್ನು ಎರೆಡಕ್ಕೆ ಇಳಿಸಿದ್ದು ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ನಿಗದಿ ಮಾಡಿದ್ದ ದರವನ್ನೂ ಹೆಚ್ಚಿಸಲಾಗಿದೆ. ದರ ಪರಿಷ್ಸರಣೆ ಹಿಂದೆ ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಿದೆ ಎಂದುಪತ್ರಿಕಾಗೋಷ್ಠಿಯಲ್ಲಿ ಗುರುವಾರ ದೂರಿದರು.
ರಾಜ್ಯ ಸರ್ಕಾರಕ್ಕೆ ವಿದ್ಯುತ್ ನಿಯಂತ್ರಣ ಆಯೋಗ 1;45 ರೂ ದರ ಏರಿಕೆ ಮಾಡುವಂತೆ ಚುನಾವಣಾ ಪೂರ್ವ ವರದಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆದಿತ್ತು ಆದರೆ ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ನಂತರ 70 ಪೈಸೆ ದರ ಏರಿಕೆಯನ್ನು ಜಾರಿ ಮಾಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ಏಕಾಏಕಿ ದರ ಏರಿಸುವ ಮೂಲಕ ಸಾಮಾನ್ಯ ಜನರಿಗೆ ತೊಂದರೆ ಆಗುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ತಯುತ್ಚಕ್ತಿ ಮಂಡಳಿ ರಚನೆಯಾಗಿ ಈ ಎಲ್ಲ ಅಧಿಕಾರಗಳು ಆಯೋಗಕ್ಕೆ ಒಳಪಟ್ಟು ಮುಂದುವರಿದದೆ. ಅಂದಿನಿಂದ ಇಂದಿನ ವರೆಗೆ ನಿಯಮಿತವಾಗಿ ವಿದ್ಯುತ್ ಬಿಲ್ ದರ ಹೆಚ್ಚಳ ನಿಯಮಿತವಾಗಿ ಆಗುತ್ತಿದ್ದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಈ ವರ್ಷ ಮೇ.12 ರಂದೇ ದರ ಪರಿಷ್ಕರಣೆಗೆ ಆಯೋಗದ ಮುಖ್ಯಸ್ಥರು ಸಹಿ ಹಾಕಿದ್ದರೂ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಈಗ ಜಾರಿಯಾಗಿವೆ ಎಂದರು.
ನೂರು ಯೂನಿಟ್‌ಗೆ ಒಳಗೆ ಹಾಗೂ ಆ ನಂತರದ ಬಳಕೆದಾರರಿಗೆ ಪ್ರತ್ಯೇಕ ದರ ನಿಗದಿ ಮಾಡಿದ್ದು, ನಿಗದಿತ ಸಮಯದಲ್ಲಿ ಮೀಟರ್ ರೀಡಿಂಗ್ ಕಾರ್ಯ ನಡೆಯದೇ ಹಲವು ಗ್ರಾಹಕರಿಗೆ ವಂಚನೆಯಾಗುತ್ತಿದೆ. ಪ್ರತಿ ತಿಂಗಳ ಕೊನೆಯ ದಿನಾಂಕದ ವರೆಗೆ ರೀಡಿಂಗ್ ಆಗಬೇಕಿದ್ದರೂ ಹಲವು ನೆಪಗಳನ್ನು ಹೇಳಿ ತಡವಾಗಿ ಬಿಲ್ ವಿತರಣೆ ಮಾಡುತ್ತಿದ್ದು ಬಿಲ್ ನೀಡುವ ದಿನಾಂಕದ ವರೆಗಿನ ಲೆಕ್ಕ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಹೆಚ್ಚಿನ ಗ್ರಾಹಕರಿಗೆ ಹೊರೆಯಾಗುತ್ತಿದ್ದು ಬಳಕೆಗಿಂತ ಹೆಚ್ಚಿನ ಹಣ ಪಾವತಿ ಮಾಡಿದಂತಾಗುತ್ತಿದೆ ಎಂದರು.
ಈ ಎಲ್ಲ ಅಂಶಗಳನ್ನು ಸರ್ಕಾರ ಗಮನಿಸಿ ಗ್ರಾಹಕರಿಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳಬೇಕು. ದರ ಪರಿಷ್ಸರಣೆ ಹಿಂಪಡೆಯುವಂತೆ ವಿದ್ಯುತ್ಚಕ್ತಿ ಆಯೋಗಕ್ಕೆ ಪತ್ರ ಬರೆಯಬೇಕು. ಇಲ್ಲವಾದರೆ ಸಾರ್ವಜನಿಕರ ಸಹಕಾರದಿಂದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಬೋರೇಗೌಡ, ನಿರ್ದೇಶಕರಾದ ನಾರಾಯಣ, ಪುಟ್ಟೇಗೌಡ, ರಮೇಶ್ ಇತರರು ಇದ್ದರು.