ಬೆಂಗಳೂರು : ರಾಜ್ಯದಲ್ಲಿ ಪ್ರತಿ ಯೂನಿಟ್‌ಗೆ 25 ಪೈಸೆ ಹಾಗೂ ಮಾಸಿಕ ನಿಗದಿತ ಶುಲ್ಕ 10 ರೂ. ದರ ಹೆಚ್ಚಳ ಮಾಡಿರುವ ಕ್ರಮವನ್ನು ರಾಜ್ಯದ ವಿವಿಧ ಕೈಗಾರಿಕಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಏರಿಕೆಯನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೊರೆ ಹೋಗಿವೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಪೂರ್ವಪರ ಆಲೋಚಿಸದೆ, ಯೂನಿಟ್‌ಗೆ 25 ಪೈಸೆ ಹಾಗೂ ಮಾಸಿಕ ಶುಲ್ಕ 10 ರೂ. ದರ ಹೆಚ್ಚಿಸಿ, ನ.1 ರಿಂದಲೇ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಈಗಾಗಲೇ ಕೋವಿಡ್ ಲಾಕ್‌ಡೌನ್ ಮತ್ತು ಇತರೆ ಕಾರಣಗಳಿಂದ ಸೂಕ್ಷ್ಮ, ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸೇರಿ ಎಲ್ಲ ಉದ್ಯಮ ನಷ್ಟದಲ್ಲಿ ಸಿಲುಕಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ದರ ಹೆಚ್ಚಳ ಮಾಡುವುದು ಸೂಕ್ತವಲ್ಲ. ಕೂಡಲೆ ಸರ್ಕಾರ ಮಧ್ಯಸ್ಥಿಕೆವಹಿಸಿ ವಿದ್ಯುತ್ ದರ ಇಳಿಕೆ ಮಾಡಬೇಕು ಎಂದು ಎ್ಕೆಸಿಸಿಐ, ಕಾಸಿಯಾ ಮತ್ತು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ರಾಜ್ಯದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೋದ್ಯಮ ಶೇ.90 ವಿದ್ಯುತ್ ಶಕ್ತಿ ಮೇಲೆ ಅವಲಂಬಿನೆ ಆಗಿದ್ದು, ಕರೊನಾ ಸಂದರ್ಭದಲ್ಲಿ ತೀವ್ರ ನಷ್ಟ ಅನುಭವಿಸಿವೆ. ಹೀಗಾಗಿ, ಕೂಡಲೆ ಏರಿಕೆ ದರ ವಾಪಸ್ ಪಡೆದು ಕೈಗಾರಿಕೋದ್ಯಮಕ್ಕೆ ನೆರವಾಗಬೇಕು.
ಕೆ.ಬಿ. ಅರಸಪ್ಪ, ಕಾಸಿಯಾ ಅಧ್ಯಕ್ಷ
ಕೋವಿಡ್ ಸಂದರ್ಭದಲ್ಲಿ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು ಶೇ.20 ಕೈಗಾರಿಕೆಗಳು ಮುಚ್ಚಿವೆ. ಶೇ.50 ಉತ್ಪಾದನಾ ಕಾರ್ಯದಲ್ಲಿ ತೊಡಗಿದ್ದು, ಇಂತಹ ವೇಳೆ ವಿದ್ಯುತ್ ದರ ಏರಿಕೆ ಮಾಡಿರುವುದು ಸೂಕ್ತವಲ್ಲ. ಮುಂದಿನ 3 ವರ್ಷ ವಿದ್ಯುತ್ ದರ ಏರಿಕೆ ಮಾಡಬಾರದು.
ಎಂ.ಪೆರಿಕಲ್ ಸುಂದರ್, ಎ್ಕೆಸಿಸಿಐ ಅಧ್ಯಕ್ಷ