ಗುಂಡ್ಲುಪೇಟೆ: ವಿದ್ಯುತ್ ತಗುಲಿ ಕಾರ್ಮಿಕನೊಬ್ಬ ಸಾವಿಗೀಡಾದ ಘಟನೆ ಸೋಮವಾರ ಪಟ್ಟಣದ ದುಂದಾಸನಪುರ ಬಡಾವಣೆಯಲ್ಲಿ ನಡೆದಿದೆ.
ಉಪಕಾರ ಕಾಲನಿಯ ವೆಂಕಟರಾಮು(58) ಮೃತರು. ದುಂದಾಸನಪುರದ ರಾಜಶೇಖರ ಅವರ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಸೋಮವಾರ ಬೆಳೆಗಳಿಗೆ ನೀರು ಹರಿಸಲು ಮೋಟಾರು ಸ್ಟಾರ್ಟ್ ಮಾಡಲು ಹೋಗಿದ್ದಾಗ ವಿದ್ಯುತ್ ತಗುಲಿ ಸಾವು ಸಂಭವಿಸಿದೆ. ಮೃತರ ಪತ್ನಿ ರಾಜಮ್ಮ ನೀಡಿದ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.